HomeGadag Newsಇನ್ನರ್‌ವ್ಹೀಲ್ ಪದಾಧಿಕಾರಿಗಳ ಪದಗ್ರಹಣ

ಇನ್ನರ್‌ವ್ಹೀಲ್ ಪದಾಧಿಕಾರಿಗಳ ಪದಗ್ರಹಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಇನ್ನರ್‌ವ್ಹೀಲ್ ಸಂಸ್ಥೆಯ 2024-25ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗುರುವಾರ ನಡೆಯಿತು.

ಸಂಸ್ಥೆಯ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ರೇಖಾ ವಡಕಣ್ಣವರ, ಕಾರ್ಯದರ್ಶಿಯಾಗಿ ಮಾಲಾದೇವಿ ದಂದರಗಿ, ಖಜಾಂಚಿಯಾಗಿ ಮಂಜುಳಾ ಓದುನವರ ಮತ್ತು ಐಎಸ್‌ಓ ನಿರ್ಮಲ ಅರಳಿ ಹಾಗೂ ಎಡಿಟರ್ ಆಗಿ ಸುಲೋಚನ ಜವಾಯಿ ಪದಗ್ರಹಣ ಸ್ವೀಕರಿಸಿದರು.

ನೂತನ ಪದಾಧಿಕಾರಿಗಳು ಕಳೆದ ವರ್ಷದ ಅಧ್ಯಕ್ಷೆ ಕಾವ್ಯ ದೇಸಾಯಿ ಅವರಿಂದ ಅಧಿಕಾರ ಸ್ವೀಕರಿಸಿದರು ಮತ್ತು ಹಿಂದಿನ ಅಧ್ಯಕ್ಷೆ ಜಯಶ್ರೀ ಮೆಳ್ಳಿಗೇರಿ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು, ಗಿರಿಜಾ ಮುದುಗಲ್ ಮತ್ತು ಡಾ. ಶೃತಿ ಹೂವಿನ್ ನೂತನ ಸದಸ್ಯರಾಗಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ರೇಖಾ ವಡಕಣ್ಣವರ, ಕಾರ್ಯದಶಿ ಮಾಲಾದೇವಿ ದಂದರಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಅನ್ನಪೂರ್ಣ ಓದುನವರ, ನಂದಾ ಧರ್ಮಾಯತ್, ರತ್ನ ಕರ್ಕಿ ಉಪಸ್ಥಿತರಿದ್ದರು. ಇಂದುಮತಿ ಜಕ್ಕನಗೌಡರ ಮಂಜುಳಾ ಅಕ್ಕಿ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!