ವಿಜಯಸಾಕ್ಷಿ ಸುದ್ದಿ, ಗದಗ: ಮಾನವೀಯ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಮಾನವನಾಗಲು ಸಾಧ್ಯ ಎಂದು ಪ್ರೊ. ಕೆ.ಎಚ್. ಬೇಲೂರ ಅಭಿಪ್ರಾಯಪಟ್ಟರು.
ಭಾರತೀಯ ರೆಡ್ ಕ್ರಾಸ್ ಭವನದಲ್ಲಿ ಗುರುವಾರ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಅತಿಥಿಗಳಾಗಿ ಆಗಮಿಸಿದ ನಗರದ ಖ್ಯಾತ ಹೃದಯ ರೋಗ ತಜ್ಞರಾದ ಡಾ. ವಿ.ಎಸ್. ಹೊಸಮಠ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಉತ್ತಮ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ರವಿ ಮೂಲಿಮನಿ ಸೇವಾ ಮನೋಭಾವನೆ ಹೊಂದಿದ ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಡಾ. ವಿ.ಎಸ್. ಹೊಸಮಠ, ರವಿ ಮೂಲಿಮನಿ, ಪ್ರೊ. ಕೆ.ಎಚ್. ಬೇಲೂರ, ಡಾ. ಬಿ.ಎಮ್. ಆಲೂರರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ವತಿಯಿಂದ 10 ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ತಲಾ 5 ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿತರಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಡಾ. ಆರ್.ಎನ್. ಗೋಡಬೊಲೆ ವಹಿಸಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎಮ್.ಡಿ. ಸಮುದ್ರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಸಭಾಪತಿಗಳಾದ ನಾರಾಯಣಪ್ಪ ಇಲ್ಲೂರ ಭಾಗವಹಿಸಿದ್ದರು.
ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ವರದಾ ಕೊಲಕಾರ ಜಿವಿಪು ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಸಲಕರಣೆ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜಿವಿಪು ಕೇಂದ್ರದ ಕ್ಲಿನಿಕಲ್ ಸೈಕಾಲಜಿಸ್ಟ್ ಪ್ರೀತಿ ಹೊಂಗಲ ಸನ್ಮಾನಿತರನ್ನು ಪರಿಚಯಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಚನ್ನಾರೆಡ್ಡಿ ಗೂಳರೆಡ್ಡಿ, ಡಾ. ಪವನ ಹುಯಿಲಗೋಳ, ಅಶೋಕ ಬಾಗಮಾರ, ಗಣೇಶಸಿಂಗ್ ಬ್ಯಾಳಿ, ಡಾ. ಪವನ ಮಹೇಂದ್ರಕರ ಹಾಗೂ ಸದಸ್ಯರು ಭಾಗವಹಿಸಿದ್ದರು. ವಾಗ್ದೇವಿ ಕುಲಕರ್ಣಿ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಫಿಸಿಯೋಥೆರಪಿಸ್ಟ್ ಡಾ. ಸಾಯಿಪ್ರಕಾಶ ಯರಗೇರಿ ವಂದಿಸಿದರು.
ಜಿವಿಪು ಕೇಂದ್ರದ ವರ್ಕ್ಶಾಪ್ನಲ್ಲಿ ಪಿ&ಓ ತಂತ್ರಜ್ಞರಾದ ತಸ್ಲಂಅಲಿ ಜಿ ಮುಲ್ಲಾ ಅವರು ತಯಾರಿಸಿದ ಕೃತಕ ಕಾಲನ್ನು ಫಲಾನುಭವಿಗೆ ಹಾಗೂ ಶಿವಯೋಗಿ ಬೆಳವಡಿ ಅವರು ತಯಾರಿಸಿದ ಸ್ಯಾಂಡಲ್ಸ್ಗಳನ್ನು 3 ಫಲಾನುಭವಿಗಳಿಗೆ, ಹ್ಯಾಂಡ್ ಸ್ಯಾಂಡಲ್ಸ್ಗಳನ್ನು 2 ಫಲಾನುಭವಿಗಳಿಗೆ, ವಕ್ರಪಾದ ಸ್ಯಾಂಡಲ್ಸ್ ನ್ನು ಓರ್ವ ಫಲಾನುಭವಿಗೆ ವಿತರಿಸಲಾಯಿತು.