ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಂದಿನ ದಿನಗಳಲ್ಲಿ ರೈತರು ಸಾವಯವ ಗೊಬ್ಬರಕ್ಕಿಂತ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಇದು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ವಿದ್ಯಾರ್ಥಿಗಳಾದ ನೀವು ಈ ಬಗ್ಗೆ ಈಗಿನಿಂದಲೇ ಅರ್ಥ ಮಾಡಿಕೊಂಡು ನಿಮ್ಮ ಪಾಲಕರಿಗೆ ಸಾವಯವ ಕೃಷಿ ಮಾಡಲು ಮತ್ತು ಸಾವಯವ ಗೊಬ್ಬರವನ್ನು ಬಳಸಲು ಒತ್ತಾಯಿಸಬೇಕೆಂದು ಸಾವಯವ ಕೃಷಿ ತಜ್ಞ ವೀರೇಶ ನೇಗಲಿ ಹೇಳಿದರು.

Advertisement

ಸಮೀಪದ ಕೋಟುಮಚಗಿಯ ಶ್ರೀ ಸೋಮೇಶ್ವರ ಪ್ರೌಢಶಾಲೆಯಲ್ಲಿ ಆಚರಿಸಲಾದ ತಂಬಾಕು ಮುಕ್ತ ದಿನಾಚರಣೆ, ಸಾವಯವ ಕೃಷಿ ಮತ್ತು ರಾಷ್ಟಿçÃಯ ಗಣಿತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಭೂಮಿಗೆ ವಿಷವುಣಿಸುವುದರ ಜೊತೆಗೆ ನಾವೂ ಸಹ ವಿಷದ ಸೇವನೆ ಮಾಡುತ್ತಿದ್ದೇವೆ. ಇದಕ್ಕೆ ಕಾರಣ ರಾಸಾಯನಿಕ ಗೊಬ್ಬರ. ಇದರ ಹೆಚ್ಚಾದ ಬಳಕೆಯಿಂದ ಇಂತಹ ಸಂದಿಗ್ಧ ಸ್ಥಿತಿಗೆ ನಾವು ಬಂದಿದ್ದೇವೆ. ಇದನ್ನು ತಪ್ಪಿಸಲು ನಾವು ಅನಿವಾರ್ಯವಾಗಿ ಸಾವಯವ ಕೃಷಿಯೆಡೆಗೆ ಗಮನ ಹರಿಸಬೇಕೆಂದು ಹೇಳಿದರು.

ತಂಬಾಕು ಸೇವನೆ ದೇಹದ ಮೇಲೆ ಬೀರುವ ಪರಿಣಾಮಗಳ ಕುರಿತು ವಿಜ್ಞಾನ ಶಿಕ್ಷಕ ಕೆ.ಆರ್. ಹಾಳಕೇರಿ ಪ್ರಾಯೋಗಿಕವಾದ ವಿವರಣೆಯನ್ನು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ವಿ.ಎಸ್. ಚಲವಾದಿ ಮಾತನಾಡಿ, ತಂಬಾಕು ಸೇವನೆಯಿಂದ ದೇಹದ ಯಾವೆಲ್ಲ ಅಂಗಗಳು ಧಕ್ಕೆಗೊಳಗಾಗುತ್ತವೆ ಎಂಬುದನ್ನೂ ನೀವು ತಿಳಿದುಕೊಂಡಿದ್ದು, ಇತರರಿಗೂ ಜಾಗೃತಿ ಮೂಡಿಸಿ ಎಂದರು.

ಆರ್.ಡಿ. ಜಗ್ಗಲ ಸ್ವಾಗತಿಸಿದರು. ಶಿಕ್ಷಕಿ ಟಿ.ಜಿ. ಕಂಬಾಳಿಮಠ ನಿರೂಪಿಸಿದರು. ರಾಜೇಶ್ವರಿ ನೀರಲಗಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here