ಗುಜರಾತ್‌ ಗಲಭೆ ಕುರಿತು ಉಲ್ಲೇಖ: ‘ಎಲ್2, ಎಂಪುರಾನ್’ ಚಿತ್ರದ 17 ದೃಶ್ಯಗಳಿಗೆ ಕತ್ತರಿ!

0
Spread the love

‘ಎಲ್​2, ಎಂಪುರಾನ್’ ಸಿನಿಮಾ ಮಲಯಾಳಂ ಚಿತ್ರರಂಗದ ಎಲ್ಲ ಗಳಿಕೆಯ ದಾಖಲೆಗಳನ್ನು ಕೇವಲ ಮೂರೇ ದಿನಕ್ಕೆ ಬಹುತೇಕ ಮುರಿದು ಬಿಸಾಡಿದೆ. ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾಗಳಾದ ‘ಮಂಜುಮೆಲ್ ಬಾಯ್ಸ್’, ‘ಆವೇಶಂ’ ಸಿನಿಮಾದ ದಾಖಲೆಗಳನ್ನು ಕೇವಲ ಮೂರು ದಿನಕ್ಕೆ ಮುರಿದು ಹಾಕಿರುವ ‘ಎಂಪುರಾನ್’ ಸಿನಿಮಾ ಹೊಸ ದಾಖಲೆಗಳನ್ನು ಸೃಷ್ಟಿಸಿದೆ.

Advertisement

ಇದರ ಬೆನ್ನಲ್ಲೇ ಮಾರ್ಚ್‌ 27ರಂದು ತೆರೆ ಕಂಡ ಮೋಹನ್‌ ಲಾಲ್‌ ಅಭಿನಯದ ಎಲ್‌2: ಎಂಪೂರನ್‌ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ 2002ರ ಗುಜರಾತ್‌ ಗಲಭೆಯ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಹೀಗಾಗಿ ಸಿನಿಮಾದ 17 ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ನಿರ್ಧರಿಸಿದೆ. ಇಂದು ಯುಗಾದಿ ಹಬ್ಬ, ನಾಳೆ ರಂಜಾನ್‌ ಹಬ್ಬದ ಹಿನ್ನೆಲೆ ರಜೆ ಇರುವ ಕಾರಣ, ಹೊಸ ಆವೃತ್ತಿಯನ್ನು ಮಂಗಳವಾರ ಸೆನ್ಸಾರ್‌ ಮಂಡಳಿಗೆ ನೀಡಲಾಗುವುದು. ಬುಧವಾರದ ಒಳಗೆ ಎಲ್ಲ ಚಿತ್ರಮಂದಿರಗಳಲ್ಲಿ ಹೊಸ ಆವೃತ್ತಿ ತಲುಪಲಿದೆ ಎಂದು ಚಿತ್ರತಂಡ ಹೇಳಿದೆ.


Spread the love

LEAVE A REPLY

Please enter your comment!
Please enter your name here