ಬೆಂಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಸಭೆ ನಡೆಸಿದ ಬೆನ್ನಲ್ಲೇ ಈಗ ಗೃಹ ಸಚಿವ ಪರಮೇಶ್ವರ್ ಅವರು ಡಿನ್ನರ್ ಸಭೆ ನಡೆಸಲು ಮುಂದಾಗಿದ್ದಾರೆ. ಇನ್ನೂ ಈ ವಿಚಾರವಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
Advertisement
ಹೊಸ ವರ್ಷದ ಖುಷಿಯಿಂದ ಊಟಕ್ಕೆ ಎಲ್ಲರೂ ಕರೆಯುತ್ತಾರೆ. ನಾನು ಕೂಡಾ ಊಟಕ್ಕೆ ಕರೆಯುತ್ತೇನೆ. ನಿಮ್ಮನ್ನು ಕರೆಯುತ್ತೇನೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಡಿನ್ನರ್ ಪಾರ್ಟಿಗೆ ರಾಜಕೀಯ ಕಲ್ಪಿಸೋದು ಬೇಡ. ಹೊಸ ವರ್ಷದ ಖುಷಿ ಇರುತ್ತೆ ಅದಕ್ಕೆ ಕರೆದು ಊಟ, ಟಿಫನ್‌ಗೆ ಕರೆಯೋದು ಸಾಮಾನ್ಯ. ಅದಕ್ಕೆ ರಾಜಕೀಯ ಅನ್ನೋದು ಬೇಡ ಎಂದಿದ್ದಾರೆ.