ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಐತಿಹಾಸಿಕ ಹಿನ್ನೆಲೆಯೆಯುಳ್ಳ ರೆಹಮಾನ ಶ್ಯಾವಲಿ ದರ್ಗಾದ ಉರುಸು ಗುರುವಾರ ದರಗಾದ ಮಂಜೂರ ಹುಸೇನ ಶ್ಯಾವಲಿ ಶರಣರ ನೇತೃತ್ವದಲ್ಲಿ ಸಂಭ್ರಮದಿಂದ ಜರುಗಿತು.
ದರ್ಗಾದಿಂದ ಪ್ರಾರಂಭವಾದ ಉರುಸಿನ ಮೆರವಣಿಗೆಯು ಮಾರುತಿ ದೇವಸ್ಥಾನ, ಗಜಾನನ ದೇವಸ್ಥಾನ, ದ್ಯಾಮವ್ವನ ದೇವಸ್ಥಾನ, ಕೊಂತಿಮಲ್ಲಪ್ಪನ ದೇವಸ್ಥಾನ, ಪಟ್ಟಣ ಪಂಚಾಯತ, ದುರ್ಗಾ ಸರ್ಕಲ್, ಜಕ್ಕಲಿ ಕ್ರಾಸ್, ಹಳೆ ಬಸ್ ನಿಲ್ದಾಣ, ಮಾರೆಮ್ಮ ದೇವಸ್ಥಾನದ ಮೂಲಕ ಮರಳಿ ದರ್ಗಾ ತಲುಪಿತು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತಾದಿಗಳು ಉರುಸಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.



