ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಎನ್.ಕೆ.ಎಂ.ಪಿ.ಎಸ್ ಸ್ಟುಡಿಯೋ ನಿರ್ಮಾಣದ ‘ನಮ್ಮ ಮತ ನಮ್ಮ ಸರಕಾರ’ ಕರ್ನಾಟಕದ ಮೊದಲ ಪ್ಯಾನ್ ಇಂಡಿಯಾ ಕಿರುಚಿತ್ರ ಏಳು ಭಾಷೆಗಳಲ್ಲಿ ಬಿಡುಗಡೆಗೊಂಡಿತು.
ಪೋಸ್ಟರ್ ಬಿಡುಗಡೆಯ ಜೊತೆಗೆ ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು, ತಮಿಳು, ಮಲಯಾಳಂ ಹೀಗೆ ಏಳು ಭಾಷೆಗಳಲ್ಲಿ ಕಿರುಚಿತ್ರವನ್ನು ಎನ್ಕೆಎಂಪಿಎಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ ಹಿರಿಯರಂಗ ಮತ್ತು ಚಿತ್ರರಂಗ ಕಲಾವಿದ ಟಿ.ಜೆ. ಭಾಂಡಗೆ ಮಾತನಾಡಿ, ಮತದಾನ ಮಾಡುವದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾನ ಅಗತ್ಯವಿದ್ದು ವಿವಿಧ ಪಕ್ಷಗಳು, ವ್ಯಕ್ತಿಗಳು ನೀಡುವ ಟೊಳ್ಳು ಭರವಸೆಗಳು, ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ತಪ್ಪದೇ ನಮ್ಮ ನಮ್ಮ ಮತವನ್ನು ಚಲಾಯಿಸಬೇಕು ಎಂದರು.
ಕಿರುಚಿತ್ರ ಬಿಡುಗಡೆ ಸಂದರ್ಭದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ವಿಕ್ರಂ ಕುಮಠ, ಸಹಾಯಕ ನಿರ್ದೇಶಕಿ ಭಾವನಾ ಶಿಂಧೆ, ಹಿರಿಯ ರಂಗಕಲಾವಿದೆ ರೇಖಾ ಹೊನವಾಡ ಮತ್ತು ನಿರ್ದೇಶಕ ಎಸ್.ಎಸ್. ಕುಲಕರ್ಣಿ(ಬಾಬಾ) ಉಪಸ್ಥಿತರಿದ್ದರು.
ತಾರಾಗಣದಲ್ಲಿ ರೂಪಶ್ರೀ ಪಾಟೀಲ, ಮಯೂರಿ ಛತ್ರೆ, ಅಭಿಷೇಕ್ ಕುಲಕರ್ಣಿ, ಸಂದೀಪ್ ಪದಕಿ, ಗೀತಾ ತಬೀಬ್, ತಾಂತ್ರಿಕ ವರ್ಗದಲ್ಲಿ ಪಿಆರ್‌ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ಭಾವನಾ ಶಿಂಧೆ, ಚಿತ್ರಕಥೆ-ಸಂಭಾಷಣೆ, ವಿಎಫ್‌ಎಕ್ಸ್-೩ಡಿ ಅನಿಮೇಷನ್, ಸಂಕಲನ ನಿರ್ದೇಶನ ಜೊತೆಗೆ ನಿರ್ಮಾಣ ಎಸ್.ಎಸ್. ಕುಲಕರ್ಣಿ(ಬಾಬಾ)ಅವರದ್ದಿದೆ. ನಿರ್ಮಾಣ ವ್ಯವಸ್ಥೆಯನ್ನು ವಿಕ್ರಂ ಕುಮಠ ವಹಿಸಿದ್ದಾರೆ.