ಶಿವಸಂಗಮ ಸಮೂಹ ಸಂಸ್ಥೆಯ ದಿನದರ್ಶಿಕೆ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಿವಸಂಗಮ ಸಮೂಹ ಸಂಸ್ಥೆಯ ಗದುಗಿನ ಕಾರ್ಯಾಲಯದಲ್ಲಿ ಸಾಧಕ ಮಹನೀಯರನ್ನು ಸನ್ಮಾನಿಸಿ, ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು.

Advertisement

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿಯ ನಿರ್ದೆಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಚ್.ಜಿ. ಹಿರೇಗೌಡ್ರ, ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಾತನಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಪಾಟೀಲ, ವ್ಯಾಪಾರಸ್ಥರಾದ ಶಿವಪ್ರಸಾದ ಕಬಾಡಿ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಅತಿಥಿಗಳು 2024ರ ವರ್ಷದ ದಿನದರ್ಶಿಕೆಯನ್ನು ಅನಾವರಣಗೊಳಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಜಿ. ಹಿರೇಗೌಡ್ರ, ಶಿವಸಂಗಮ ಸಮೂಹ ಸಂಸ್ಥೆಯು ಉತ್ತಮ ಕಾರ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ, ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿರುವದು ಅಭಿನಂದನೀಯ ಎಂದರು.

ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಾತನಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಪಾಟೀಲ, ವ್ಯಾಪಾರಸ್ಥರಾದ ಶಿವಪ್ರಸಾದ ಕಬಾಡಿ ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಸಂಸ್ಥೆಯ ಕಾರ್ಯವೈಖರಿ, ಪ್ರಗತಿಯನ್ನು ವಿವರಿಸಿದರು.

ವೇದಿಕೆಯ ಮೇಲೆ ಸಂಸ್ಥೆಯ ನಿರ್ದೆಶಕರಾದ ಪ್ರಶಾಂತ ದೇಸಾಯಿಮಠ, ಎಂ.ಬಿ. ಲಿಂಗದಾಳ, ಕಳಕಪ್ಪ ನಾಗರಾಳ, ಶಿವಸಂಗಮ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವ್ಹಿ.ಎಸ್. ಶಿವಕಾಳಿಮಠ, ಉಪಾಧ್ಯಕ್ಷ ಮಹೇಶ ಗಾಣಿಗೇರ ಉಪಸ್ಥಿತರಿದ್ದರು.

ಕಿರಣ ಹಿರೇಮಠ ಪ್ರಾರ್ಥಿಸಿದರು, ಪ್ರಶಾಂತ ದೇಸಾಯಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.  ವ್ಯವಸ್ಥಾಪಕ ಬಸವರಾಜ ಹಳ್ಳಿಕೇರಿ ನಿರೂಪಿಸಿದರು. ಎಂ.ಜಿ. ಗಾಣಿಗೇರ ವಂದಿಸಿದರು.


Spread the love

LEAVE A REPLY

Please enter your comment!
Please enter your name here