ವಿಜಯಸಾಕ್ಷಿ ಸುದ್ದಿ, ಲಕ್ಷ್ಮೀೇಶ್ವರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಂದಾಗ ಪಂಚಮಸಾಲಿ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಹಾಗೂ ಕ್ರಮ ಸಂಖ್ಯೆಯನ್ನು ಎ-868 ಎಂದು ಬರೆಸಬೇಕೆಂದು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಹೇಳಿದರು.
ಪಟ್ಟಣದ ಸಂಘದ ಕಚೇರಿಯಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಮಾಹಿತಿ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮ ಹಿಂದಿನ ಹಿರಿಯರು ಜಾತಿಯನ್ನು ಲಿಂಗಾಯತ ಪಂಚಮಸಾಲಿ ಎಂದೇ ಬರೆಸಿದ್ದಾರೆ. ಹೀಗಾಗಿ ಈಗಲೂ ಜಾತಿ ಕಾಲಂನಲ್ಲಿ ಅದನ್ನೇ ಬರೆಸಬೇಕು. ಉಪಜಾತಿ ಕಾಲಂನ ಅವಶ್ಯಕತೆ ಇಲ್ಲ. ಸಮಾಜ ಬಾಂಧವರು ಈ ವಿಷಯವನ್ನು ಮರೆಯಬಾರದು ಎಂದು ಹೇಳಿದರು.
ಸಮಾಜದ ಮುಖಂಡರಾದ ಡಿ.ಬಿ. ಬಳಿಗಾರ ಹಾಗೂ ಚಂಬಣ್ಣ ಬಾಳಿಕಾಯಿ ಮಾತನಾಡಿ, ಪಂಚಮಸಾಲಿ ಸಂಘದವರು ಪ್ರಕಟಿಸಿದ ಮಾಹಿತಿ ಪತ್ರಿಕೆಯಂತೆ ಧರ್ಮ ಮತ್ತು ಜಾತಿಯನ್ನು ಬರೆಸಬೇಕು. ಅದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚೆನ್ನಪ್ಪ ಕರಿಯತ್ತಿನ, ಫಕ್ಕೀರೇಶ ಕವಲೂರ, ಬಸಣ್ಣ ಉಮಚಗಿ, ಮಲ್ಲಿಕಾರ್ಜುನ ನೀರಲಗಿ, ಸಾಲ್ಮನಿ, ನೀಲಪ್ಪ ಕರ್ಜೆಕಣ್ಣವರ, ಚಂದ್ರು ಮಾಗಡಿ, ಫಕ್ಕೀರೇಶ ಕವಲೂರ, ಮಂಜುನಾಥ ಗೌರಿ, ಮಲ್ಲಿಕಾರ್ಜುನ ನೀರಾಲೋಟಿ ಮತ್ತಿತರರು ಇದ್ದರು.