ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಜಿಲ್ಲಾ ಘಟಕವು ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಜಿ.ಪಂ ಸಿಇಓ ಹಾಗೂ ಡಿಡಿಪಿಐ ಮೂಲಕ ಶಿಕ್ಷಣ ಸಚಿವರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳವಾರ ಮನವಿ ಸಲ್ಲಿಸಿತು.
2017ರವರೆಗೆ ನೇಮಕವಾದ ಶಿಕ್ಷಕರನ್ನು 1ರಿಂದ 7ಕ್ಕೆ ನೇಮಕರಾದ ಶಿಕ್ಷಕರೆಂದು ಪರಿಗಣಿಸಿ, ಉಲ್ಲೇಖ (1)ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕಾತಿ ಆದವರಿಗೆ ಪೂರ್ವಾನ್ವಯಗೊಳಿಸಬಾರದು. ಪದವೀಧರ ಶಿಕ್ಷಕರೆಂದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾಜ್ಯೇಷ್ಠತೆಯೊಂದಿಗೆ ಪದನಾಮೀಕರಿಸಬೇಕೆಂದು ಒತ್ತಾಯಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು. ಅನ್ಯ ಕಾರ್ಯಗಳಿಂದ ಹಾಗೂ ಆನ್‌ಲೈನ್ ಕೆಲಸಗಳಿಂದ ಶಿಕ್ಷಕರ ಮೇಲೆ ಆಗುತ್ತಿರುವ ಒತ್ತಡ ಕಡಿಮೆ ಮಾಡುವದು, ಎಲ್‌ಬಿಎ ಶಿಕ್ಷಕರಿಗೆ ಹೊರೆ ಆಗಿರುವದರಿಂದ ಇದನ್ನು ಸಹ ಸರ್ಕಾರ ಮರು ಪರಿಶೀಲಿಸಿ ಶಿಕ್ಷಕರಿಗೆ ಆಗುತ್ತಿರುವ ಹೊರೆಯನ್ನು ತಪ್ಪಿಸಬೇಕು ಎಂಬ ಬೇಡಿಕೆಯುಳ್ಳ ಮನವಿಯನ್ನು ಸಂಘದ ಪದಾಧಿಕಾರಿಗಳು ಅರ್ಪಿಸಿದರು.
ಗದಗ ಜಿಲ್ಲಾ ಘಟಕದ ಅಧ್ಯಕ್ಷ ವ್ಹಿ.ಎಂ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಹೇಶ ಕುರಿಯವರ, ಗೌರವಾಧ್ಯಕ್ಷ ಪಿ.ಈರಪ್ಪ, ಉಪಾಧ್ಯಕ್ಷ ಎಂ.ವೈ. ಜಕ್ಕರಸಾನಿ, ಉಪಾಧ್ಯಕ್ಷೆ ಬಿ.ಎನ್. ಕ್ಯಾತನಗೌಡ್ರ, ಕೋಶಾಧ್ಯಕ್ಷ ಎ.ಕೆ. ವಂಟಿ, ಸಹ ಕಾರ್ಯದರ್ಶಿ ಮೋಹನ ಮೆಣಸಿನಕಾಯಿ, ಎಂ.ಎಸ್. ತೊಂಡಿಹಾಳ, ಸಂಘಟನಾ ಕಾರ್ಯದರ್ಶಿ ಮುತ್ತು ಮಾದರ, ಬಿ.ಬಿ. ಹರ್ತಿ, ಜಿಲ್ಲಾ ಪ್ರಧಾನ ಗುರುಗಳ ವೇದಿಕೆ ಸಂಚಾಲಕ ಎಸ್.ಬಿ. ಅಂಗಡಿ, ಜಿಲ್ಲಾ ಮಹಿಳಾ ವೇದಿಕೆ ಸಂಚಾಲಕಿ ಎಸ್.ವ್ಹಿ. ಕುಲಕರ್ಣಿ, ಗೌರವ ಕಾರ್ಯದರ್ಶಿ ಪಿ.ಎಫ್. ಅಗಸಿಮನಿ ಅವರು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಗದಗ ಜಿ.ಪಂ ಸಿಇಓ, ಗದಗ ಡಿಡಿಪಿಐ ಅವರು ಮನವಿಯನ್ನು ಸಂಬಂಧಿಸಿದವರಿಗೆ ರವಾನಿಸುವದಾಗಿ ಭರವಸೆ ನೀಡಿದರು.
ಶಿಕ್ಷಕರ ಸಂಘದ ಗದಗ ಗ್ರಾಮೀಣ ಅಧ್ಯಕ್ಷ ಎಸ್.ಆರ್. ಬಂಡಿ, ಕಾರ್ಯದರ್ಶಿ ಎನ್.ಎಚ್. ಪಾಟೀಲ, ಗದಗ ನಗರ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಕಾರ್ಯದರ್ಶಿ ಪಿ.ಸಿ. ಕನಾಜ, ರೋಣ ತಾಲೂಕಾಧ್ಯಕ್ಷ ವೈ.ಡಿ. ಗಾಣಿಗೇರ, ಕಾರ್ಯದರ್ಶಿ ಸಿ.ಕೆ. ಕೇಸರಿ, ಶಿರಹಟ್ಟಿ ತಾಲೂಕಾಧ್ಯಕ್ಷ ಬಿ.ಬಿ. ಕಳಸಾಪೂರ, ಕಾರ್ಯದರ್ಶಿ ಬೇವಿನಗಿಡದ, ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಬಿ.ಎಸ್. ಹರ್ಲಾಪೂರ, ಕಾರ್ಯದರ್ಶಿ ಚಂದ್ರು ನೇಕಾರ, ಮುಂಡರಗಿ ತಾಲೂಕಾಧ್ಯಕ್ಷ ಶಿವಕುಮಾರ ಸಜ್ಜನರ, ಕಾರ್ಯದರ್ಶಿ ಎ.ಜೆ. ಪವಾರ, ನರಗುಂದ ಅಧ್ಯಕ್ಷ ವ್ಹಿ.ಕೆ. ಕ್ಯಾಮನಗೌಡ, ಕಾರ್ಯದರ್ಶಿ ಎನ್.ಎಚ್. ಜಾಧವ, ಗಜೇಂದ್ರಗಡ ಅಧ್ಯಕ್ಷ ಎಸ್.ಕೆ. ಸರಗಣಾಚಾರಿ, ಕಾರ್ಯದರ್ಶಿ ಬಿ.ಎಸ್. ಅಣ್ಣಿಗೇರ, ಪದಾಧಿಕಾರಿಗಳಾದ ಡಿ.ಎಸ್. ತಳವಾರ, ಕೆ.ಬಿ. ಕೊಣ್ಣೂರ, ಎಸ್.ಪಿ. ಕೊಪ್ಪದ, ಎಂ.ವೈ. ಮಲಕಶೆಟ್ಟಿ ಸೇರಿದಂತೆ ಪದಾಧಿಕಾರಿಗಳು, ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.
ಮಹೇಶ ಕುರಿಯವರ ಸ್ವಾಗತಿಸಿದರು. ವ್ಹಿ.ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ಬಂಡಿ ವಂದಿಸಿದರು.
ಸರ್ಕಾರಕ್ಕೆ ಮನವಿ ಸಲ್ಲಿಸಿ ಇಂದಿಗೆ ಒಂದು ವರ್ಷವಾದರೂ ಸರ್ಕಾರ ಸಂಘದ ಬೇಡಿಕೆಯನ್ನು ಈಡೇರಿಸದ ಕಾರಣ ಇಂದು ಪ್ರತಿಭಟನೆ ಕೈಗೊಂಡು ಮನವಿ ಸಲ್ಲಿಸಲಾಗಿದೆ. ಆಗಸ್ಟ್ 25ರೊಳಗಾಗಿ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಸೆಪ್ಟೆಂಬರ್ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ, ಅಹೋರಾತ್ರಿ ಧರಣಿ ನಡೆಸಲಾಗುವದು. ಸರ್ಕಾರ ಇದಕ್ಕೆ ಆಸ್ಪದ ನೀಡದೆ ಬೇಡಿಕೆಯನ್ನು ಈಡೇರಿಸುವ ಆಶಾಭಾವನೆ ಹೊಂದಿದ್ದೇವೆ.
– ವ್ಹಿ.ಎಂ. ಹಿರೇಮಠ
ಜಿಲ್ಲಾ ಅಧ್ಯಕ್ಷರು.