ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದ ಧಾರ್ಮಿಕ ಮುಖಂಡ ವೀರಣ್ಣ ಪವಾಡದ ಅವರ ನಿವಾಸದಲ್ಲಿ ಭಕ್ತರಿಂದ ಬುಧವಾರ ಕೊಟ್ಟೂರು ಕ್ಷೇತ್ರದ ಶ್ರೀ ಶಿವಪ್ರಕಾಶ ಮಹಾಸ್ವಾಮಿಗಳ ಪಾದಪೂಜೆಯನ್ನು ಶ್ರದ್ಧೆಯಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಿವಪ್ರಕಾಶ ಸ್ವಾಮಿಗಳು ಆಶೀರ್ವಚನ ನೀಡಿ, ಭಾರತದ ಉಸಿರು ಧರ್ಮ ಮತ್ತು ಭಾವೈಕ್ಯತೆ, ರಾಷ್ಟ್ರಪ್ರೇಮ, ಧರ್ಮನಿಷ್ಠೆ, ಕರ್ತವ್ಯಶೀಲತೆ ಪ್ರತಿಯೊಬ್ಬರ ಉಸಿರಾಗಲಿ. ಗೋಮಾತೆ, ಭೂಮಾತೆ, ರಾಷ್ಟ್ರಮಾತೆ ಇವು ನಮ್ಮ ಸಂಸ್ಕೃತಿಯ ಅಮೂಲ್ಯ ಸಂಪತ್ತುಗಳಾಗಿವೆ. ಸ್ವಾಭಿಮಾನದಿಂದ ನಾಡು-ನುಡಿ ಶ್ರೀಮಂತಗೊಳ್ಳಲು ಸಾಧ್ಯ. ಪ್ರೀತಿ, ವಾತ್ಸಲ್ಯ, ಸಹನೆ, ಕರುಣೆ, ಪರೋಪಕಾರಗಳು ಧರ್ಮದ ಪ್ರಮುಖ ತತ್ವಗಳು. ಬಾಳೆಂಬ ಕಾಯಿಯನ್ನು ಹಣ್ಣಾಗಿಸಿಕೊಂಡು ಫಲಪ್ರಾಪ್ತಿಗೊಳಿಸಿಕೊಳ್ಳುವುದೇ ಮನುಷ್ಯ ಧರ್ಮ. ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು. ಯಾವಾಗಲೂ ನಾಶವಾಗದೇ ಇರುವುದು ಧರ್ಮ, ಇದನ್ನು ನಾಶ ಮಾಡುವ ಶಕ್ತಿ ಯಾರಿಗೂ, ಯಾವ ಕಾಲಕ್ಕೂ ಇರುವುದಿಲ್ಲ ಎಂದು ನುಡಿದರು.
ಈರಣ್ಣ ಪವಾಡದ, ನಿರ್ಮಲದೇವಿ ಪವಾಡದ, ಲಾವಣ್ಯ ಪವಾಡದ, ವೀರಸೋಮೇಶ್ವರ, ಚೇತನ ಹಿರೇಮಠ, ನಾಗಪ್ಪ ತಂಬ್ರಳ್ಳಿ, ಕಲ್ಲಯ್ಯ ಪೂಜಾರ್, ರಮೇಶ ಅಣ್ಣಿಗೇರಿ, ವಿಷ್ಣಪ್ಪ ಅಸುಂಡಿ, ಬಸವನಗೌಡ ಪಾಟೀಲ್ ಮುಂತಾದವರಿದ್ದರು.