ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮಾಜದಲ್ಲಿ ಅಂಗವಿಕಲರ ಬಗೆಗಿನ ತಾತ್ಸಾರ ಮನೋಭಾವವನ್ನು ತೊಡೆದು ಹಾಕಲು ಮತ್ತು ಅವರಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಸ್ವಾಭಿಮಾನದಿಂದ ಬಾಳಲು ಉತ್ತೇಜನ ನೀಡುವುದು ಅಂಗವಿಕಲರ ದಿನಾಚರಣೆಯ ಮುಖ್ಯ ಉದ್ದೇಶ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಪಟ್ಟಣದ ಪರ್ವತಮಲ್ಲಯ್ಯನ ದೇವಸ್ಥಾನದಲ್ಲಿ ಪುಲಿಗೆರೆ ಶ್ರೀ ಸೋಮೇಶ್ವರ ಅಂಗವಿಕಲರ ಸಂಘ, ಜಿಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುರಸಭೆ ಲಕ್ಷೇಶ್ವರ, ನಗರ ಪುನರ್ವಸತಿ ಕಾರ್ಯಕರ್ತರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಮಾತನಾಡಿದರು.
ಅಂಗವಿಕಲರು ಸ್ವಾವಲಂಬಿಯಾಗಿ ಬದುಕಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಕೀಲರಾದ ಎಸ್.ಪಿ. ಬಳಿಗಾರ, ರಾಮರಾವ್ ವೆರ್ಣೇಕರ, ಶಿಕ್ಷಕಿ ಮೈತ್ರಾದೇವಿ ಹಿರೇಮಠ, ವೀಣಾ ಸಾತಣ್ಣವರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಆರ್.ಸಿ. ಪಾಟೀಲ, ಆಯ್.ಎಸ್. ಮಡಿವಾಳರ, ಫುಲಗೇರಿ ಸೋಮೇಶ್ವರ ಅಂಗವಿಕಲರ ಸಂಘ ಅಧ್ಯಕ್ಷ ಶಿವಲಿಂಗಪ್ಪ ಕುಂಬಾರ, ಶಿರಹಟ್ಟಿಯ ಎಮ್‌ಆರ್‌ಡಬ್ಲ್ಯೂ ಭಾರತಿ ಮೂರಶಿಳ್ಳಿ, ನಗರ ಪುನರವಸತಿ ಕಾರ್ಯಕರ್ತ ಮಂಜುನಾಥ ರಾಮಗೇರಿ, ಪರಮೇಶ ಬಳಿಗಾರ, ಶರಣಪ್ಪ ಶಿಳ್ಳಿನ, ನಾಗಪ್ಪ ಅಣ್ಣಿಗೇರಿ, ನಾಮದೇವ ಲಮಾಣಿ, ವನಜಾಕ್ಷಿ ಹಾಲಗಿಮಠ, ಬಸವರಾಜ ಅರ್ಕಸಾಲಿ, ಶರಣಪ್ಪ ಬಡ್ನಿ, ನಧಾಪ್ ಸೇರಿದಂತೆ ಸೋಮೇಶ್ವರ ಅಂಗವಿಕಲರ ಸಂಘದ ಸದಸ್ಯರು, ನಗರದ ವಿಕಲಚೇತನರು ಭಾಗವಹಿಸಿದ್ದರು.