ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಇಂದು ಬಿಗ್ಡೇಯಾಗಿದೆ. ಬರೀ ದರ್ಶನ್ ಮಾತ್ರವಲ್ಲ, ದರ್ಶನ್ ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಮಹತ್ವದ ದಿನವಾಗಿದೆ. ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಹೈಕೋರ್ಟ್ ನೀಡಿರುವ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂಬುದು ಇವತ್ತು ತೀರ್ಮಾನ ಆಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.
ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮಹದೇವನ್ ನೇತೃತ್ವದ ದ್ವಿಸದಸ್ಯ ಪೀಠವು ಇವತ್ತು ವಿಚಾರಣೆ ಮುಂದುವರಿಸಲಿದೆ. ಈಗಾಗಲೇ ಸರ್ಕಾರಿ ಪರ ವಕೀಲರ ವಾದ ಮುಗಿದಿದ್ದು,
ದರ್ಶನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ಇವತ್ತು ವಾದ ಮಂಡಿಸಲಿದ್ದಾರೆ. ಕಪಿಲ್ ಸಿಬಲ್ ಅವರ ವಾದವನ್ನು ಆಲಿಸಿ ಸುಪ್ರೀಂಕೋರ್ಟ್ ಬಹುತೇಕ ಇವತ್ತೇ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆ ಇದ್ದು ದರ್ಶನ್‌ಗೆ ಟೆನ್ಷನ್ ಹೆಚ್ಚಿಸಿದೆ. ನಟ ಥಾಯ್ಲೆಂಡ್‌ನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮಾಡುತ್ತಾ ಜಾಲಿ ಮೂಡ್‌ನಲ್ಲಿದ್ದ ದರ್ಶನ್‌ಗೆ ಬೇಲ್ ರದ್ದಾಗುವ ಭೀತಿ ಆವರಿಸಿದೆ.