ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಐದು ತಿಂಗಳಿಂದ ಜೈಲಲ್ಲಿರುವ ನಟ ದರ್ಶನ್ಗೆ ಇಂದು ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಬೇಲ್ ಸಿಕ್ಕಿದ್ದು ಅವರಿಗೆ ನೀಡಿರುವಷ್ಟೇ ಸಂತೋಷವನ್ನು ಅವರ ಅಭಿಮಾನಿಗಳಿಗೂ ನೀಡಿದೆ. ಇನ್ನೂ ನಟ ದರ್ಶನ್ 131 ದಿನಗಳ ನಂತರ ಹೊರಗೆ ಬಂದಿದ್ದಾರೆ.ಜೈಲಿನಿಂದ ಹೊರಗೆ ಬರುವಾಗ ಕುಂಟುತ್ತಾ ಹೊರಗೆ ಬಂದಿದ್ದಾರೆ.
ನಟ ದರ್ಶನ್ ಕರೆದೊಯ್ಯಲು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಳ್ಳಾರಿ ಜೈಲಿನ ಬಳಿ ಕಾಯುತ್ತಿದ್ದಾರೆ. ದರ್ಶನ್ ಜೈಲಿನಿಂದ ಹೊರಗೆ ಬರುವಾಗ ಎಲ್ಲ ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೊರಗೆ ಬಂದಿದ್ದಾರೆ. ಆದರೆ, ಜೈಲಿನಿಂದ ಹೊರಗೆ ಬರುವಾಗ ಕುಂಟುತ್ತಾ ಬಂದಿದ್ದು, ಬೆನ್ನು ನೋವು ತೀವ್ರವಾಗಿ ಉಲ್ಬಣಗೊಂಡಿದೆ ಎಂಬ ಲಕ್ಷಣಗಳು ಕಂಡುಬರುತ್ತಿವೆ. ಅಂದಹಾಗೆ ದರ್ಶನ್ರ ಇಬ್ಬರು ಸಹೋದರರು ಶೂರಿಟಿ ನೀಡಿದ್ದಾರೆ.



