ರೇಣುಕಸ್ವಾಮಿ ಕೊಲೆ ಕೇಸ್: ಇವತ್ತಾದ್ರೂ ದರ್ಶನ್ʼಗೆ ಮನೆಯೂಟದ ಭಾಗ್ಯ ಕರುಣಿಸುತ್ತಾ ಕೋರ್ಟ್

0
Spread the love

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್​​​​ ಹಂತ ತಲುಪಿದೆ. ಎಫ್​ಎಸ್​ಎಲ್, ಮರಣೋತ್ತರ ಪರೀಕ್ಷೆಗಳು ಕೃತ್ಯಕ್ಕೆ ಸಾಕ್ಷ್ಯ ಹೇಳುತ್ತಿವೆ. ಕಳೆದೆರಡು ತಿಂಗಳಿನಿಂದ ಪ್ರಕರಣದ ತನಿಖೆ ನಡೆಸ್ತಿರುವ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆಗೂ ತಯಾರಿ ನಡೆಸಿದ್ದಾರೆ. ಈ ಮಧ್ಯೆದರ್ಶನ್​ಗೆ ಮನೆ ಊಟ ಬೇಕೆಂದು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು  ನಡೆಯಲಿದೆ ಮನೆ ಊಟ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ನಟ ದರ್ಶನ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯಲ್ಲಿ ಆರೋಗ್ಯದ ಕಾರಣ ನೀಡಿದ್ದರು.

Advertisement

ಕಳೆದ ಬಾರಿ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈಗಾಗಲೇ ವರದಿ ಸಲ್ಲಿಕೆ ಆಗಲಿದ್ದು, ಇಂದು ಹೈಕೋರ್ಟ್ ಏಕ ಸದಸ್ಯ ಪೀಠ ತನ್ನ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ. ಜೈಲು ಅಧಿಕಾರಿಗಳು, ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗಿದೆ. ಜೈಲಿನ ವೈದ್ಯಾಧಿಕಾರಿಗಳು ಸಹ ದರ್ಶನ್​ಗೆ ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ.

 


Spread the love

LEAVE A REPLY

Please enter your comment!
Please enter your name here