ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ʼಗೆ ಜೈಲೂಟವೇ ಗತಿ

0
Spread the love

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಮತ್ತೆ ಜೈಲೂಟವನ್ನೇ ಸೇವಿಸಬೇಕೇಂದು ಕೋರ್ಟ್‌ ಆದೇಶ ನೀಡಿದೆ. ಹೌದು ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್, ಜೈಲೂಟ ತನಗೆ ಒಗ್ಗೂಡುತ್ತಿಲ್ಲ. ಹಾಗಾಗಿ ಮನೆ ಊಟ, ಹಾಸಿಗೆ, ದಿಂಬು, ಪುಸ್ತಕ ನೀಡುವಂತೆ ಕೋರಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

Advertisement

ಜೈಲಿನ ನಿಯಮಗಳ ಪ್ರಕಾರ ಮನೆಯ ಊಟ ಎನ್ನುವುದರ ಬಗ್ಗೆ ಉಲ್ಲೇಖ ಇಲ್ಲ. ಅನಾರೋಗ್ಯದ ಸಮಯದಲ್ಲಿ ಮಾತ್ರ ವಿಶೇಷ ಊಟ ನೀಡಬಹುದು ಹೊರತು ಮನೆಯ ಊಟವನ್ನೇ ನೀಡಬೇಕು ಎಲ್ಲೂ ಉಲ್ಲೇಖ ಮಾಡಿಲ್ಲ. ಅನಾರೋಗ್ಯದ ವೇಳೆ ವಿಶೇಷ ಕಾಳಜಿ ಆಹಾರ ನೀಡಬೇಕು. ವಾರದಲ್ಲಿ ಒಮ್ಮೆ ಮಾತ್ರ ಮಾಂಸಾಹಾರದ ಊಟ ಕೊಡಬಹುದು.

ಅದನ್ನು ಬಿಟ್ಟು ಪ್ರತಿ ದಿನ ಬಿರಿಯಾನಿ ತಿನ್ನಬೇಕು ಎಂದರೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಮನೆಯ ಊಟವನ್ನು ನೀಡುವಂತೆ ಇಲ್ಲ. ಆರೋಪಿಗೆ ಭೇದಿ ಆಗುತ್ತಿದ್ದರೆ ಉಪ್ಪು ಖಾರ ಇಲ್ಲದ ಸಾತ್ವಿಕ ಆಹಾರ ನೀಡಬೇಕು. ಕುಡಿಯಲು ಬಿಸಿ ನೀರು ಬೇಕು ಅಂದರೆ ಜ್ವರ ಇದ್ದಾಗ ಮಾತ್ರ ನೀಡ್ತಾರೆ. ಅದನ್ನ ಬಿಟ್ಟು ಪ್ರತಿ ದಿನ ಸ್ನಾನ ಮಾಡಲು ಬಿಸಿ ನೀರು ಕೊಡಲು ಸಾಧ್ಯವಿಲ್ಲ. ಅನಾರೋಗ್ಯ ಇದ್ದರೆ 15 ದಿನ ಮಾತ್ರ ವಿಶೇಷವಾಗಿ ಅವಕಾಶ ನೀಡಬಹುದು.

 


Spread the love

LEAVE A REPLY

Please enter your comment!
Please enter your name here