ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಸೇರಿ ಆರು ಮಂದಿಯ ಜಾಮೀನು ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಅ.14ರಂದು ಸಿಸಿಹೆಚ್ 57 ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ಮೂಡಿದೆ. ನಟ ದರ್ಶನ್ ಜಾಮೀನು ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
A2 ನಟ ದರ್ಶನ್, A1 ಪವಿತ್ರಾಗೌಡ, A8 ರವಿಶಂಕರ್, A11 ನಾಗರಾಜ್ ಹಾಗೂ A12 ಲಕ್ಷ್ಮಣ್, A13 ದೀಪಕ್ ಜಾಮೀನು ಭವಿಷ್ಯ ನಿರ್ಧರವಾಗಲಿದೆ. ಈಗಾಗಲೇ ಎಸ್‌ಪಿಪಿ ದೀಪಕ್ ಮತ್ತು ರವಿಶಂಕರ್‌ಗೆ ಜಾಮೀನು ನೀಡಬಹುದು ಎಂದಿದ್ದಾರೆ. ಆದರೆ ದರ್ಶನ್ ಸೇರಿ ನಾಲ್ವರ ಜಾಮೀನಿಗೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಲೆಯಲ್ಲಿ ಭಾಗಿಯಾದ ಸಾಕ್ಷ್ಯಗಳ ಬಗ್ಗೆ ಸಂಪೂರ್ಣ ಉಲ್ಲೇಖಿಸಲಾಗಿದೆ. ದರ್ಶನ್ ಪರವಾಗಿ ವಕಾಲತ್ತು ವಹಿಸಿರುವ ಹಿರಿಯ ವಕೀಲ ಸಿವಿ ನಾಗೇಶ್‌ರಿಂದ ಸಾಕ್ಷ್ಯಗಳೇ ಇಲ್ಲವೆಂಬಂತೆ ವಾದಿಸಿದ್ದಾರೆ.
ಪವಿತ್ರಾಗೌಡ ಪರವಾಗಿ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಇತ್ತ ಕೋರ್ಟ್ ತೀರ್ಪು, ಅತ್ತ ಜೈಲಲ್ಲಿ ಆರೋಪಿಗಳಿಗೆ ಟೆನ್ಷನ್ ಶುರುವಾಗಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ್ಗೆ ಬೆನ್ನು ನೋವು ಉಲ್ಬಣಗೊಂಡಿದ್ದು, ಈಗಾಗಲೇ ಜೈಲು ವೈದ್ಯರು ಹಾಗೂ ಹೊರಗಿನಿಂದಲೂ ಬಂದಿದ್ದ ವೈದ್ಯರು ತಪಾಸಣೆ ನಡೆಸಿದ್ದಾರೆ.