ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೊನೆಗೂ ಮೂವರಿಗೆ ಸಿಕ್ತು ಬಿಡುಗಡೆ ಭಾಗ್ಯ

0
Spread the love

ತುಮಕೂರು: ಜಾಮೀನು ಪಡೆದು ಹೊರಗೆ ಬರಬೇಕು ಎಂದು ಕಾಯುತ್ತಿರುವ ನಟ ದರ್ಶನ್​ಗೆ ಮತ್ತೆ ನಿರಾಸೆ ಆಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ತುಮಕೂರು ಜೈಲಿನಲ್ಲಿ ಇದ್ದರು. ಈಗ ಮೂವರಿಗೆ ಒಂದು ವಾರದ ಹಿಂದೆಯೇ ಜಾಮೀನು ನೀಡಲಾಗಿತ್ತು.

Advertisement

ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ಪರದಾಟ ನಡೆಸಿದ್ದ ಕುಟುಂಬಸ್ಥರಿಗೆ ಮಂಗಳವಾರ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳವಾರ ರಾತ್ರಿ ತುಮಕೂರು ಜೈಲಾಧಿಕಾರಿಗಳಿಗೆ ಜಮೀನು ಆದೇಶದ ಪ್ರತಿ ಮೇಲ್ ಮೂಲಕ ತಲುಪಿದ್ದು, ಬುಧವಾರ ಎ-16 ಆರೋಪಿ ಕೇಶವಮೂರ್ತಿ, ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here