ಬೆಂಗಳೂರು: ಟಿಬಿ ಡ್ಯಾಮ್‌ಗೆ ಹೋಗಿ ವೀಕ್ಷಣೆ ಮಾಡಿ, ಕೂಡಲೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಟಿಬಿ ಡ್ಯಾಮ್‌ಗೆ ಹೋಗಿ ವೀಕ್ಷಣೆ ಮಾಡಿ, ಕೂಡಲೇ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲಾ ಗುತ್ತಿಗೆದಾರರ ಜೊತೆ ಮಾತಾಡಿದ್ದೇನೆ. ಡಿಸೈನ್‌ಗಳನ್ನ ಕಳಿಸಿಕೊಟ್ಟಿದ್ದೇವೆ. ಇನ್ನೂ 4-5 ದಿನಗಳಲ್ಲಿ ರಿಪೇರಿ ಕೆಲಸ ಆಗುತ್ತೆ. ರೈತರ ಬೆಳೆ ಉಳಿಸುವ ವ್ಯವಸ್ಥೆ ಮಾಡಿದ್ದೇವೆ. ನಾಳೆ ನಮ್ಮ ಸಿಎಂ ಹೋಗ್ತಾರೆ. ನಾನು ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚೆ ಮಾಡಿದ್ದೇನೆ. ಯಾರೂ ಗಾಬರಿ ಪಡಬೇಕಿಲ್ಲ ಎಂದು ಅಭಯ ನೀಡಿದರು.
ಡ್ಯಾಂ ಸ್ಥಿತಿ ಬಹಳ ಡೇಂಜರ್ ಇತ್ತು. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ. ಸುರಕ್ಷತೆಗಾಗಿ ಟೀಮ್ ಮಾಡಿ ಎಲ್ಲಾ ಡ್ಯಾಮ್‌ಗಳಿಗೂ ಕಳಿಸಿಕೊಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ತಜ್ಞರ ಸಮಿತಿ ರಚನೆ ಮಾಡ್ತೇವೆ. ಆ ಸಮಿತಿ ಎಲ್ಲಾ ಡ್ಯಾಮ್‌ಗಳಿಗೂ ವಿಸಿಟ್ ಮಾಡಿ ಪರಿಶೀಲಿಸುತ್ತದೆ. ಬೇರೆ ಕಡೆ ಡಬಲ್ ಆಪ್ಷನ್ಸ್ ಇದೆ, ಒಂದು ಗೇಟ್‌ಗೆ ಎರಡು ಲಿಂಕ್ ಇದ್ದಾವೆ. ಇಲ್ಲಿ ಒಂದೇ ಒಂದು ಚೈನ್ ಇತ್ತು, ಅದು ಕಟ್ ಆಗಿದೆ. ನೀರು, ನೋಡಿದ್ರೆ ಸ್ವಲ್ಪ ಸಮಸ್ಯೆಯಿತ್ತು. ನೀರು ಉಳಿಸಬಹುದು, 55-60 ಟಿಎಂಸಿ ನೀರು ಉಳಿಸುವ ವ್ಯವಸ್ಥೆ ಆಗುತ್ತಿದೆ ಎಂದು ಹೇಳಿದರು.