ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 1950ರ ಜನವರಿ 26ರಂದು ಸ್ವತಂತ್ರ ಭಾರತವು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸ್ವತಂತ್ರ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಲ್ಪಟ್ಟಿತು. ನಮ್ಮ ಗಣರಾಜ್ಯದ ಸಂವಿಧಾನದಲ್ಲಿ ಅಡಕವಾದ ಜನತೆಯ ಹಕ್ಕು-ಬಾಧ್ಯತೆಗಳು ನಾವು ಪ್ರಜಾಸಾರ್ವಭೌಮ ರಾಷ್ಟ್ರವೆಂದು ಸಾರಿ ಹೇಳುತ್ತವೆ. ವಾಕ್ ಸ್ವಾತಂತ್ರ‍್ಯ, ವಿಚಾರ ಸ್ವಾತಂತ್ರ‍್ಯ, ಧಾರ್ಮಿಕ ಸ್ವಾತಂತ್ರ‍್ಯಗಳುಳ್ಳ ನಮ್ಮ ರಾಷ್ಟ್ರವು ಜಾತ್ಯಾತೀತ ರಾಷ್ಟ್ರವೆಂದು ಹೇಳಿಕೊಳ್ಳಲ್ಪಟ್ಟಿದೆ ಎಂದು ಹಿರಿಯ ಶಿಕ್ಷಕ ಬಸವರಾಜ ಆಯ್.ಗರ್ಜಪ್ಪನವರ ಹೇಳಿದರು.
ಇಲ್ಲಿಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.1 ಇವರ ಸಹಯೋಗದಲ್ಲಿ ಜರುಗಿದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.1ರ ಅಧ್ಯಕ್ಷ ನಿಂಗಪ್ಪ ಗಡಗಿ ಧ್ವಜಾರೋಹಣ ನೆರವೇರಿಸಿದರು. ವೇದಿಕೆ ಮೇಲೆ ಸಂಘದ ನಿರ್ದೇಶಕರಾದ ದೇವಪ್ಪ ಖಂಡು, ಫಕ್ಕಿರಪ್ಪ ಕಲಬಂಡಿ, ಫಕೀರಸಾಬ ನದಾಫ್, ಶಿವನಗೌಡ ರೋಣದ, ವೀರಪ್ಪ ಗಾರವಾಡ, ಬಾಬುಸಾಬ ನದಾಫ್, ರಮೇಶ ಹೊಸಮನಿ, ಲಕ್ಷ್ಮಣ ಗುಡಗೇರಿ, ಬಸಪ್ಪ ಬಿಳೇಹಾಳ, ನೀಲಪ್ಪ ಗಡಗಿ, ಶಿಕ್ಷಕರಾದ ಆರ್.ಬಿ. ಬರದ್ವಾಡ, ರಫಿಯಾ ದಂಡಿನ, ಆಸ್ಮಾ ಕನವಳ್ಳಿ, ಅಂಬುಜಾ ಕುಲಕರ್ಣಿ, ಫಾತಿಮಾ ಬರದ್ವಾಡ, ಇಸ್ಮಾಯಿಲ್ ಕೊರ್ಲಹಳ್ಳಿ, ಸಂತೋಷ್ ಕರಿ ಇದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಶರಣಪ್ಪ ಗರ್ಜಪ್ಪನವರ ಹಾಗೂ ರಫಿಯಾ ದಂಡಿನ ಕಾರ್ಯಕ್ರಮ ನಿರ್ವಹಿಸಿದರು.