ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸೆಟ್ಲಮೆಂಟ ಸರಕಾರಿ ಉರ್ದು ಕಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ ನಂ. 3ರಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿತು. ಜಮಾತ್ ಚೇರಮನ್ ಇಮಾಮಸಾಬ ಹುಲ್ಲೂರ ಮಾತನಾಡಿ, ಎಲ್ಲರೂ ಶಿಕ್ಷಣ ಹೊಂದಬೇಕು ಎಂದರು.
ಅಲೆಮಾರಿ ವಿಮುಕ್ತ ಬುಡಕಟ್ಟು ಚಪ್ಪರಬಂದ ಸಮಾಜ ಸಂಘದ ಬಸೀರ ಸಂಕನಾಳ ಮಾತನಾಡುತ್ತಾ, ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಶಾಲಾ ಸಿಬ್ಬಂದಿಯವರ ಪರಿಶ್ರಮದ ಫಲವಾಗಿ ಇಂದು ಇಂಗ್ಲಿಷ್ ಮಾತನಾಡುವಂತಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆಯ ಮುಖ್ಯೋಪಾಧ್ಯಾಯೆ ಸಲ್ಮಾ ಝ. ಬೆಳಗಾಂವಾಲೆ ಇವರನ್ನು ಸಮಾಜದ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸಮಾಜದ ಹಿರಿಯರಾದ ಮೋತಿಲಾಲ ಸಿಂದಗಿ, ಹುಸೇನಸಾಬ ಚಪ್ಪರಬಂದ, ಹಾಜಿಮಲಂಗ್ ನಂದಿಹಾಳ, ಬಸೀರ ಸಂಕನಾಳ, ಇಮಾಮಸಾಬ ಮುಜಾವರ, ನಬಿರಸೂಲ್ ಕೊಪ್ಪ, ಇಮಾಮಸಾಬ ವಡ್ಡೊಡಗಿ ಮುಂತಾದವರು ಉಪಸ್ಥಿತರಿದ್ದರು.