ಕರ್ತವ್ಯ ನಿರತ ಸಿಬ್ಬಂದಿಗೆ ನಿಂದನೆ ಮಾಡಿದವರ ಮೇಲೆ ಕ್ರಮಕ್ಕೆ ಮನವಿ

0
gunjikar
Spread the love

ವಿಜಯಸಾಕ್ಷಿ ಸುದ್ದಿ, ಗದಗ : 2024ರ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರತರಾದ ಅಬಕಾರಿ ಮುಖ್ಯ ಪೇದೆ ಹನಮಪ್ಪ.ಎಸ್ ನರೇಗಲ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿರುವ ಮುಂಡರಗಿಯ ಯಮನಪ್ಪ ಶಿವಪ್ಪ ಹಳ್ಳಿಕೇರಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಗುಂಜೀಕರ ಅವರ ನೇತೃತ್ವದ ನಿಯೋಗ ಶುಕ್ರವಾರ ಗದಗ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿ ಒತ್ತಾಯಿಸಿತು.

Advertisement

ಈ ನಾಗರಿಕನ ಅನುಚಿತ ವರ್ತನೆಗೆ ಹೆದರಿದ ಅಬಕಾರಿ ಪೇದೆ ಹನಮಪ್ಪ ಅವರು ಮಾನಸಿಕವಾಗಿ ಕುಗ್ಗಿ ಆತಂಕದಲ್ಲಿದ್ದಾರೆ. ಅವರನ್ನ ನಿಂದಿಸಿರುವ ಯಮನಪ್ಪ ಹಳ್ಳಿಕೇರಿ ಮೇಲೆ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಸಿಬ್ಬಂದಿಗೆ ಧೈರ್ಯ ನೀಡಬೇಕಿದೆ. ಇಂತಹ ಘಟನೆಗಳು ಸಾರ್ವಜನಿಕ ಸೇವೆಯಲ್ಲಿರುವ ಸರಕಾರಿ ನೌಕರರೊಂದಿಗೆ ಮರುಕಳಿಸದಂತೆ ವಿಶೇಷ ಕಾನೂನು ಜಾರಿಗೆ ತರುವಂತೆ ಮನವಿಯಲ್ಲಿ ತಿಳಿಸಿದರು.

ಈ ಸಂದರ್ಭಧಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಪದಾಧಿಕಾರಿಗಳಾದ ಡಾ. ಬಸವರಾಜ ಬಳ್ಳಾರಿ, ಕೆ.ಬಿ. ಕೊಣ್ಣೂರ, ಎಸ್.ಆರ್. ಬಂಡಿ, ಹಿರೇಮಠ, ಡಿ.ಬಿ. ಬೇಲೇರಿ, ಡಿ.ಎಸ್. ದುರಗಣ್ಣವರ, ನಾಗರಾಜ ಹಳ್ಳಿಕೇರಿ, ಎಸ್.ಪಿ. ನಾಗರಹಳ್ಳಿ, ಎಚ್.ಎಂ. ಕದಾಂಪೂರ, ಮಹೇಶ ಕುರಿ, ಹೊಂಬಳ, ಸಂಗಳದ, ಎಸ್.ಎನ್. ಲಿಂಗದಾಳ, ಮೋದುಳಮಠ, ಎನ್.ಎಚ್. ಪಾಟೀಲ್, ಸೋಮಣ್ಣವರ, ಸರಹಣಾಚಾರಿ, ನಾರಾಯಣ, ಮಂಜುನಾಥ ಮಾಲೀಪಾಟಿಲ್, ಆತ್ಮಲಿಂಗಯ್ಯ ಮಠಪತಿ, ಶರಣಪ್ಪ ಕರಡಿ, ಪರಶುರಾಮ ವಡ್ಡರ, ನೇತ್ರಾ ಉಪ್ಪಾರ, ಆಶಾರಾಣಿ, ಶಂಕರ ಸೇರಿದಂತೆ ನೂರಾರು ನೌಕರ ಬಾಂಧವರಿದ್ದರು.


Spread the love

LEAVE A REPLY

Please enter your comment!
Please enter your name here