ವಿಜಯಸಾಕ್ಷಿ ಸುದ್ದಿ, ಗದಗ: ರಾಣಿ ಚೆನ್ನಮ್ಮ ಪಾರ್ಟಿಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸತೀಶ್ ಎಂ.ಕಳ್ಳಿ, ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ಭೀಮವ್ವ ಹಾಗೂ ಭಾರತಿ ಕೊಪ್ಪಳ, ಜಿಲ್ಲಾ ಅಧ್ಯಕ್ಷರಾದ ನಿಂಗನಗೌಡ ಹಾದಿಮನಿ, ಕೊಪ್ಪಳ ಜಿಲ್ಲಾ ಲಿಂಗಾಯತ್ ಸಮಾಜದ ಅಧ್ಯಕ್ಷರಾದ ಜಗನ್ನಾಥ್ ಸಿದ್ಲಿಂಗಪ್ಪ ಇವರುಗಳ ನೇತೃತ್ವದಲ್ಲಿ ಸವದತ್ತಿ ತಹಸೀಲ್ದಾರರ ಮೂಲಕ ಸುಕ್ಷೇತ್ರ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಆರು ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸತೀಶ್ ಎಂ.ಕಳ್ಳಿ ಮಾತನಾಡಿ, ಸುಕ್ಷೇತ್ರ ಶ್ರೀ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಆರು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದರೆ ಈ ಕ್ಷೇತ್ರ ಬರುವವರಿಗೆ ತಮ್ಮ ಧಾರ್ಮಿಕ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಸವದತ್ತಿ ತಹಸೀಲ್ದಾರರು, ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಇಲಾಖೆಗೆ ಮತ್ತು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಮಕ್ತುಮ್‌ಸಾಬ್ ಯಮನೂರುಸಾಬ್ ನದಾಫ್, ರಂಗಪ್ಪ ಮಲ್ಲಪ್ಪ ತಲ್ಯಾಳ, ಪಕೀರಗೌಡ ರಾಮನಗೌಡ ಮಾಲಿಪಾಟೀಲ್, ಶರಣಪ್ಪ ಎಲ್ಲಪ್ಪ ಮಾಗಿ, ಯಮನೂರಪ್ಪ ಮಾರುತಪ್ಪ ಭಜಂತ್ರಿ, ಹನುಮಂತ ಕೆಳಗಡೆ, ಕಳಗಪ್ಪ ಭಜಂತ್ರಿ, ಗಂಗಮ್ಮ ಶಿರಹಟ್ಟಿ, ಅಂಬಮ್ಮ ಅವಳಾದ, ಮುತ್ತಣ್ಣ ಲಂಬಾಣಿಮ, ನಾಗೇಂದ್ರ ಬೆಂಗಳೂರು ಉಪಸ್ಥಿತರಿದ್ದರು.