`ಅಮರಶಿಲ್ಪಿ ಜಕಣಾಚಾರಿ ವೃತ್ತ’ ನಾಮಕರಣಕ್ಕೆ ಮನವಿ

0
Request for naming `Amarashilpi Jakanachari Circle'
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಹಿರೇಬಣದ ಕೋರ್ಟ್ ಹತ್ತಿರವಿರುವ ವೃತ್ತಕ್ಕೆ `ಅಮರಶಿಲ್ಪಿ ಜಕಣಾಚಾರಿ ವೃತ್ತ’ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಲಕ್ಷ್ಮೇಶ್ವರ ತಾಲೂಕಾ ಘಟಕದವರು ಮಂಗಳವಾರ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು, ಅಮರಶಿಲ್ಪಿ ಜಕಣಾಚಾರಿ ಕೇವಲ ಒಂದು ಊರು, ಜಿಲ್ಲೆ, ರಾಜ್ಯ ಎನ್ನದೇ ಇಡೀ ಪ್ರಪಂಚಕ್ಕೆ ಕೊಡುಗೆ ನೀಡಿದ್ದಾರೆ. ಅದರಲ್ಲಿ ನಮ್ಮ ಗದಗ ಜಿಲ್ಲೆಗೆ ಅವರ ಕೊಡುಗೆಗಳು ಸಾಕಷ್ಟಿದ್ದು, ಜಿಲ್ಲೆಯ ಲಕ್ಕುಂಡಿ, ಸೂಡಿ ಮತ್ತು ಯಳವತ್ತಿ ಗ್ರಾಮಗಳಲ್ಲಿ ಜಕಣಾಚಾರಿಯವರ ಕಲಾಕೃತಿಗಳು ವಿಜೃಂಭಿಸುತ್ತಿವೆ. ಪಟ್ಟಣದ ಶ್ರೀ ಸೋಮನಾಥ, ಕಾಳಿಕಾದೇವಿ ಹಾಗೂ ಮೌನೇಶ್ವರ, ಲಕ್ಷ್ಮಿಲಿಂಗ, ಶಂಖ ಬಸದಿ, ಆನಂತನಾಥ ಬಸದಿ, ಸಹಸ್ರ ಲಿಂಗ ದೇವಸ್ಥಾನ, ಅಗಸ್ತ್ಯ ತೀರ್ಥ ಸೇರಿದಂತೆ ಇನ್ನೂ ಅನೇಕ ದೇವಾಲಯಗಳು, ಹಾಗೂ ಕಲ್ಯಾಣಿಗಳಿವೆ. ಪಟ್ಟಣದಲ್ಲಿ ಜಕಣಾಚಾರಿಯವರ ಕಲೆಯನ್ನು ಕಾಣಬಹುದಾಗಿದೆ ಎಂದರು.

ಈ ನಿಟ್ಟಿನಲ್ಲಿ ಪಟ್ಟಣದ ಕೋರ್ಟ್ ಹತ್ತಿರವಿರುವ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿ ವೃತ್ತ ಎಂದು ನಾಮಕರಣ ಮಾಡುವ ಮೂಲಕ ಮಹಾನ್ ಶಿಲ್ಪಿಯನ್ನು ಗೌರವಿಸುವ ಕಾರ್ಯ ಮಾಡಬೇಕೆಂದು ಸಮಾಜದ ಪರವಾಗಿ ಮನವಿ ಸಲ್ಲಿಸುತ್ತಿರುವುದಾಗಿ ವಿನಂತಿಸಿದರು.

ಮನವಿ ಸ್ವೀಕರಿಸಿದ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ ಹಾಗೂ ಮುಖ್ಯಾಧಿಕಾರಿ ಮಹೇಶ ಹಡಪದ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸುವುದಾಗಿ ತಿಳಿಸಿದರು.

ಸಮಾಜದ ಈರಪ್ಪ ಬಡಿಗೇರ, ರಾಮಚಂದ್ರ ಬಡಿಗೇರ, ಭಾಸ್ಕರ್ ಸೊರಟೂರ, ರಾಘವೇಂದ್ರ ಬಡಿಗೇರ, ಮೋಹನ ಸುತಾರ, ಶಿವಾನಂದ ಬಡಿಗೇರ, ರವಿ ಸುತಾರ, ಜಿ.ಎಸ್. ಬಾಲೇಹೊಸೂರ, ಅಶೋಕ ಸೊರಟೂರ, ದೇವಿಂದ್ರಪ್ಪ ಬಡಿಗೇರ, ಸಿ.ಜಿ. ಸಿಂಗಟಾಲೂರ, ಮೌನೇಶ ಇಟಗಿ, ಮೌನೇಶ ಬಾಲೇಹೊಸೂರು, ಎಸ್.ಡಿ. ಪತ್ತಾರ, ಗಣೇಶ, ನಾರಾಯಣ, ಮಾನಪ್ಪ ದುದ್ದಗಿ, ನಾಗರಾಜ ಪತ್ತಾರ, ಜಿ.ಕೆ. ಸೊರಟೂರ, ಪ್ರೇಮಕ್ಕ ಬಡಿಗೇರ, ಶಶಿಕಲಾ ಬಡಿಗೇರ, ಸರಸ್ವತಿ ಬಾಲೆಹೊಸೂರ, ಪಿ.ಬಿ. ಸೊರಟೂರ, ವಿ.ಸಿ. ಸಿಂಗಟಾಲೂರ, ರತ್ನವ್ವ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here