ವಿಜಯಸಾಕ್ಷಿ ಸುದ್ದಿ, ಗದಗ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಿಡಾಡಿ ಗೂಳಿಯು ಗುದ್ದಿದ್ದರಿಂದ ಸ್ಥಳದಲ್ಲಿಯೇ ವ್ಯಕ್ತಿಯು ಮೃತಪಟ್ಟ ಘಟನೆ ಮಾಸುವ ಮುನ್ನವೇ ಬೆಟಗೇರಿಯಲ್ಲಿ ಇನ್ನೊಂದು ಬಿಡಾಡಿ ಗೂಳಿಯು ಗುದ್ದಿದ್ದರಿಂದ ವ್ಯಕ್ತಿಯು ದೊಡ್ಡ ಚರಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇಂತಹ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರು ಭಯಭೀತರಾಗಿದ್ದು, ಎಲ್ಲ ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಿ ರಕ್ಷಣೆ ಒದಗಿಸಬೇಕೆಂದು ಗದಗ-ಬೆಟಗೇರಿ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಆಸೀಫ್ ಅಲಿ ಉಮನಾಬಾದಿ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶ್ರೀಧರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಲೀಮ್ ಶಹಾಪೂರ, ಮಹಬೂಬ ಓಲಿ, ಮೊಹ್ಮದ ಯೂಸುಫ್, ನಾವೀದ್ ಕಲಾದಗಿ, ದಾದಾಪೀರ ಹುಬ್ಬಳ್ಳಿ, ಸಾಧಿಕ್ ಸಿತ್ತವಾಡಗಿ, ಅಸ್ಲಮ್ ಮಾಲದಾರ, ತಬ್ರೇಜ್ ಕಲಾದಗಿ, ಆಫಾನ್ ಕಂಪ್ಲಿ, ಮೈನುದ್ದೀನ ಕಲಾದಗಿ, ಮುಸ್ತಾಖ ಅಹ್ಮದ ಮುಲ್ಲಾ, ರಶೀದ ಮುಲ್ಲಾ, ಅಸ್ಲಮ್ ಖಾದರವರ ಮುಂತಾದವರು ಇದ್ದರು.