ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ವೇದಿಕೆಯ ಹಿರಿಯರು ಕಾರ್ಯಾಲಯಕ್ಕೆ ನಿವೇಶನ ಕಲ್ಪಿಸುವಂತೆ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಬುಧವಾರ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ, ಕಾರ್ಯಾಲಯಕ್ಕೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಕಲ್ಪಿಸಬೇಕು. ಅಲ್ಲದೇ ಸದ್ಯಕ್ಕೆ ಪಟ್ಟಣದ ಪ್ರಾಥಮಿಕ ಶಾಲೆ ನಂ-4ರ ಹಿಂದೆ ಖಾಲಿ ಇರುವ ಪುರಸಭೆ ಕಟ್ಟಡವನ್ನು ಕಾರ್ಯಾಲಯಕ್ಕಾಗಿ ಉಪಯೋಗಿಸಲು ಅವಕಾಶ ಕಲ್ಪಿಸಿಕೊಡುವಂತೆ ಕೋರಿದರು.
ಶಾಸಕರು ಸ್ಥಳದಲ್ಲಿಯೇ ಇದ್ದ ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಅವರಿಗೆ ಖಾಲಿ ಇರುವ ಕಟ್ಟಡವನ್ನು ಕೊಡಲು ಸೂಚಿಸಿದರು. ಈ ವೇಳೆ ಚನ್ನಪ್ಪ ಕೋಲಕಾರ, ಎನ್.ವಿ. ಹೇಮಗಿರಿಮಠ, ವೈ.ಎಸ್. ಮಡಿವಾಳರ, ಎ.ಸಿ. ಶಿಗ್ಲಿಮಠ, ಸುರೇಶ ರಾಚನಾಯ್ಕರ, ಪಾರವ್ವ ಧರಣಿ, ಸುಶೀಲಮ್ಮ ಗೌಳಿ, ಪಾಟೀಲ ಕುಲಕರ್ಣಿ ಮುಂತಾದವರಿದ್ದರು.



