ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಬೇಗ ನಿಲುವು ಪ್ರಕಟಿಸಲಿ ಅಂತ ಮನವಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬೇಗ ಪ್ರಕಟಿಸಲಿ, ಕೇಂದ್ರದಿಂದ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ತೊಂದರೆಯಾಗುವುದು ಬೇಡವೆಂದು ತಾನು ಕೇಂದ್ರಕ್ಕೆ ತಿಳಿಸಿದ್ದಾಗಿ ಹೇಳಿದರು.
ಇನ್ನೂ ಸ್ಟೀಲ್ ಬ್ರಿಡ್ಜ್ ಹಾಗೂ ಸುರಂಗ ಮಾರ್ಗಕ್ಕೆ ಬಿಜೆಪಿ ವಿರೋಧದ ವಿಚಾರವಾಗಿ, ಕೆಜೆ ಜಾರ್ಜ್ ಸ್ಪೀಲ್ ಬ್ರಿಡ್ಜ್ ಮಾಡಲು ಹೊರಟಾಗ ವಿರೋಧ ಮಾಡಿದ್ರು. ವಿರೋಧ ಪಕ್ಷಗಳು ಟೀಕೆ ಮಾಡಿದಷ್ಟು ಒಳ್ಳೆಯದು. ಸದನದಲ್ಲಿ ಚರ್ಚೆ ಮಾಡುವ ಉದ್ದೇಶದಿಂದ ಸುಮ್ಮನಿದ್ದೇನೆ. ಟನಲ್ ಪರ್ಯಾಯವಾಗಿ ಬೆಂಗಳೂರು ರಸ್ತೆ ಮಾಡಲು ಪರಿಹಾರಕ್ಕೆ ಮೂರು ಲಕ್ಷ ಕೋಟಿ ಬೇಕು ಎಂದು ವಿವರಿಸಿದರು.
ಈ ಹಿಂದೆ ಡಬಲ್ ಡೆಕ್ಕರ್ ರಸ್ತೆ ಮಾಡಿದ್ದರೆ ಇಷ್ಟೊಂದು ಸಮಸ್ಯೆ ಆಗ್ತಿರಲಿಲ್ಲ. ಬೈಯುವವರೆಲ್ಲಾ ಬೈತಾ ಇರಲಿ, ಒಳ್ಳೆಯ ಸಲಹೆ ಕೊಟ್ಟರೆ ಸ್ವೀಕಾರ ಮಾಡ್ತೇನೆ. ಮುಂಬೈ, ದೆಹಲಿ ರಸ್ತೆ ಬೆಂಗಳೂರಿಗಿಂತ ಕಳಪೆ ಇದೆ. ಯಾರೂ ಮುಂಬೈ, ದೆಹಲಿ ಟ್ರಾಫಿಕ್ ಗಮನಿಸುತ್ತಿಲ್ಲ, ಎಲ್ಲರೂ ಬೆಂಗಳೂರು ಬಗ್ಗೆ ಮಾತನಾಡ್ತಾರೆ ಎಂದು ತಿರುಗೇಟು ನೀಡಿದರು.