ವಿಜಯಸಾಕ್ಷಿ ಸುದ್ದಿ, ಗದಗ: ಗದಗ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರರ ಭಾವಚಿತ್ರ ಅಳವಡಿಸುವಂತೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರಿಗೆ ಜೈ ಭೀಮ ಸಂಘರ್ಷ ರಾಜ್ಯ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ವಾಯ್.ಹುಬ್ಬಳ್ಳಿಯವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣೇಶ ವಾಯ್.ಹುಬ್ಬಳ್ಳಿ ಮಾತನಾಡಿ, ನವೀಕೃತ ಗದಗ ರೈಲ್ವೆ ನಿಲ್ದಾಣದಲ್ಲಿ ಒಳಗಡೆ ಅಥವಾ ಹೊರಗಡೆ ಡಾ. ಬಿ.ಆರ್. ಅಂಬೇಡ್ಕರರ ಭಾವಚಿತ್ರವನ್ನು ಅಳವಡಿಸಬೇಕು. ಡಾ. ಬಿ.ಆರ್. ಅಂಬೇಡ್ಕರರ ಭಾವಚಿತ್ರವನ್ನು ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಆದರೆ ಗದಗ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಮಂಜುನಾಥ ಎಫ್.ತೌಜೂಲ್, ನಗರಸಭೆಯ ಮಾಜಿ ಸದಸ್ಯ ಬಾಬು ಬಳ್ಳಾರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮಾಮಹುಸೇನ ಕುನ್ನಿಬಾವಿ, ರಾಷ್ಟ್ರೀನ್ ಜೋಸೆಫ, ನಜೀರ ಕುನ್ನಿಬಾವಿ, ರಾಜೇಶ ಶಟ್ಟರ, ಬಸವರಾಜ ಬದಾಮಿ, ರಫೀಕ ನವಲಗುಂದ, ಫರದೀನ ಕಾತಾಪೂರ, ಶಿವು ಕಡಿವಾಳ, ಶ್ರೀಕಾಂತ ಅಲವಾಗಲಿ, ಪ್ರೇಮ ಹುಬ್ಬಳ್ಳಿ, ಹೇಮಂತ ಹುಬ್ಬಳ್ಳಿ ಇನ್ನಿತರರು ಉಪಸ್ಥಿತರಿದ್ದರು.