HomeGadag Newsಓಪಿಎಸ್ ಜಾರಿಗೆ ಸರಕಾರದ ಮೇಲೆ ಒತ್ತಡ ತರುವಂತೆ ಶಾಸಕರಿಗೆ ಮನವಿ

ಓಪಿಎಸ್ ಜಾರಿಗೆ ಸರಕಾರದ ಮೇಲೆ ಒತ್ತಡ ತರುವಂತೆ ಶಾಸಕರಿಗೆ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ನಿವೃತ್ತಿಯ ಸಂಧ್ಯಾ ಕಾಲದಲ್ಲಿ ರ‍್ಕಾರಿ ನೌಕರರಿಗೆ ಸಿಗಬೇಕಾಗಿದ್ದ ಹಳೆಯ ನಿವೃತ್ತಿ ವೇತನ ವ್ಯವಸ್ಥೆ ಮರುಸ್ಥಾಪನೆ ಆಗಬೇಕು. ಎನ್ಪಿಎಸ್ನಂತಹ ಮಾರಕ ಯೋಜನೆಯನ್ನು ನಿಲ್ಲಿಸಬೇಕು. ಈ ಬಗ್ಗೆ ಕಾಂಗ್ರೆಸ್ ನೇತೃತ್ವದ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಎನ್ಪಿಎಸ್ ನೌಕರರ ಸಂಘ ಪಟ್ಟಣದಲ್ಲಿ ಶನಿವಾರ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಮನವಿ ರ‍್ಪಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕರು, ಮುಂದಿನ ಅಧಿವೇಶನದಲ್ಲಿ ಈ ವಿಷಯದ ಕುರಿತು ಪ್ರಶ್ನೆ ಮಾಡಿ ಸರಕಾರಕ್ಕೆ ಎನ್ಪಿಎಸ್ನಿಂದ ಆಗುವ ಸಮಸ್ಯೆ ಬಗ್ಗೆ ವಿವರಿಸುವದರ ಜೊತೆಗೆೆ ಓಪಿಎಸ್ ಜಾರಿಗೊಳಿಸುವಂತೆ ಮನವಿ ಮಾಡಿ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

ಈ ಸಂರ‍್ಭದಲ್ಲಿ ಎನ್ಪಿಎಸ್ ನೌಕರರ ಸಂಘದ ಗೌರವಾಧ್ಯಕ್ಷ ಮಂಜುನಾಥ ಕೊಕ್ಕರಗುಂದಿ, ಪ್ರ.ಕರ‍್ಯರ‍್ಶಿ ಸಿದ್ದಪ್ಪ ಸಜ್ಜಗಾರ, ಉಪಾಧ್ಯಕ್ಷ ಶ್ರೀಕಾಂತ ನಂದೆಣ್ಣವರ, ಕರಾಸ ನೌಕರರ ಸಂಘದ ತಾಲೂಕಾಧ್ಯಕ್ಷ ಜಿ.ಡಿ. ಹವಳದ, ಪ್ರ.ಕರ‍್ಯರ‍್ಶಿ ಎಮ್.ಎ. ನದಾಫ್, ಎಂ.ಡಿ. ವಾರದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಸ್. ರ‍್ಲಾಪೂರ, ಪ್ರ.ಕರ‍್ಯರ‍್ಶಿ ಚಂದ್ರಕಾಂತ ನೇಕಾರ, ಬಸವರಾಜ ಯರಗುಪ್ಪಿ, ಎ.ಎಮ್. ಅಕ್ಕಿ, ಎ.ಬಿ. ಗೌಡರ, ಮಂಜುನಾಥ ಚವ್ಹಾಣ, ಮುತ್ತು ಹುಬ್ಬಳ್ಳಿ, ಸತೀಶ್ ಬೋಮಲೆ, ಗೋಪಾಲ ರಾಜೊಳಿ, ಜ್ಯೋತಿ ಗಾಯಕವಾಡ, ಎಚ್.ವಾಯ್. ಹಂಜಗಿ, ಬಿ.ಟಿ. ಹೆಬ್ಬಾಳ, ರಫೀಕ್ ಬಾವಿಕಟ್ಟಿ, ಆಸಿಫ್ ಅತ್ತಾರ, ಕೆಪಿಟಿಸಿಎಲ್ ಸಂಘದ ಸತೀಶ ಮೇಟಿ, ರಘುಪತಿ ನಾಯಕ, ಬಸವರಾಜ ಹೆಬ್ಬಾಳ, ಕಿರಣಕುಮಾರ ಪಮ್ಮಾರ ಹಾಗೂ ತಾಲೂಕಿನ ಎಲ್ಲಾ ರ‍್ಕಾರಿ ನೌಕರರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿದ 2006ರ ನಂತರ ಸೇವೆಗೆ ಸೇರಿದ ರ‍್ಕಾರಿ ಅನುದಾನಿತ ಹಾಗೂ ನಿಗಮ ಮಂಡಳಿ ನೌಕರರಿಗೆ ತಕ್ಷಣವೇ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ಮಾಡಲು ಸಚಿವ ಸಂಪುಟದಲ್ಲಿ ನರ‍್ಧಾರ ಹಾಗೂ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆ ಮಾಡಿ ರ‍್ಕಾರಕ್ಕೆ ಒತ್ತಾಯಿಸಬೇಕು ಎಂದು ಎನ್ಪಿಎಸ್ ಸಂಘದ ಅಧ್ಯಕ್ಷ ಎಫ್.ಎಸ್. ತಳವಾರ ಮನವಿ ಪತ್ರ ಸಲ್ಲಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!