ವಿಜಯಸಾಕ್ಷಿ ಸುದ್ದಿ, ಗದಗ : ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ 2500 ಎಮ್.ವಿ.ಎ 400/220 ಕೆ.ವಿ. ವಿದ್ಯುತ್ ಉಪಕೇಂದ್ರದ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗಗಳ ನಿರ್ಮಾಣ ಮಾಡುವ ಕಾಮಗಾರಿಯ ವಿಚಾರದಲ್ಲಿ ಭೂ ಪರಿಹಾರ ಬೆಲೆ ನಿಗದಿಪಡಿಸುವಂತೆ ಡಂಬಳ ಗ್ರಾಮದ ರೈತರು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತರ ಜಮೀನಿನಲ್ಲಿ ವಿದ್ಯುತ್ ಗೋಪುರ ನಿರ್ಮಣ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶ ಪ್ರಕಾರ ಪ್ರತಿ ಚದರ ಮೀಟರಿಗೆ 2500 ರೂಪಾಯಿ ಮತ್ತು ತಂತಿಗೆ 20 ರೂ.ನಂತೆ ಬೆಳೆಹಾನಿ ಮತ್ತು ಇತರ ಹಾನಿ ಆದಲ್ಲಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ. ಈ ಪರಿಹಾರ ನಮಗೆ ಸಾಲುವುದಿಲ್ಲ. ಕಾರಣ, ಪುನಃ ಪರಿಶೀಲನೆ ಮಾಡಿ ನಮಗೆ ಪ್ರತಿ ಚದರ ಮೀಟರಗೆ 3500 ರೂನಂತೆ ಮತ್ತು ತಂತಿ 50 ರೂ ಪ್ರತಿ ಚದರ ಮೀಟರಿಗೆ ಬೆಳೆಹಾನಿ ಪರಿಹಾರ ಹೆಚ್ಚಿಸಿ ಪರಿಹಾರ ನೀಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರೈತರಾದ ಜಗದೀಶ ಹಳ್ಳಿ, ಚನ್ನಬಸಪ್ಪ ಪಟ್ಟಣಶೆಟ್ಟಿ, ಶಂಕ್ರಯ್ಯ ಬಾಳಿಹಳ್ಳಿಮಠ, ಕುಷಪ್ಪ ಕದಡಿ, ಮುರಳೀಧರ ಹೊಸಮನಿ, ಮುಳ್ಳಪ್ಪ ಹಳ್ಳಾಕಾರ, ದೇವಪ್ಪ ಕೆರಳ್ಳಿ, ಗವಿಸಿದ್ದಪ್ಪ ಪಾರಪ್ಪನವರ, ಗುರಪ್ಪ ಹಟ್ಟಿ, ನಾಗಮ್ಮ ಆದಮ್ಮನವರ, ಅರ್ಜುನಪ್ಪ ಹೊಂಬಳ, ಆರ್.ಅರ್. ಕೊರ್ಲಗಟ್ಟಿ, ಜೆ.ಎಚ್. ಸಣ್ಣಪ್ಯಾಟಿ, ಹುಯಿಲಗೋಳ ಉಪಸ್ಥಿತರಿದ್ದರು.