ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಸಾರಿಗೆ ಇಲಾಖೆಯ ಎಲ್ಲ ಘಟಕಗಳೂ ಆಧುನಿಕ ರೀತಿಯಲ್ಲಿ ನಿರ್ಮಾಣಗೊಂಡಿದ್ದರೂ ಗದಗ ಘಟಕ ಮಾತ್ರ 1964ರ ಸ್ಥಿತಿಯಲ್ಲಿಯೇ ಮುಂದುವರೆಯುತ್ತಿದ್ದು, ವಿಶಾಲ ಘಟಕ ನಿರ್ಮಾಣಕ್ಕೆ ಒತ್ತು ನೀಡಿ ಹೊಸ ಬಸ್ ಸ್ಟ್ಯಾಂಡ್ ನಲ್ಲಿ ವಿಭಾಗೀಯ ಕಾರ್ಯಾಗಾರ, ವಿಭಾಗೀಯ ಉಗ್ರಾಣ ಕಛೇರಿ ಹಾಗೂ ಕಾರ್ಮಿಕರಿಗೆ ಸಭೆ, ಸಮಾರಂಭಗಳಿಗಾಗಿ ಸಭಾಂಗಣ ನಿರ್ಮಾಣಕ್ಕೆ ರೂಪರೇಷ ಸಿದ್ಧಗೊಳಿಸಿ ಕಾರ್ಯಗತಗೊಳಿಸಲು ಜಂಟಿ ಸಮಿತಿಯ ನೌಕರರ ಸಂಘಟನೆಗಳ ಪರವಾಗಿ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಂತಣ್ಣ ಮುಳವಾಡ, ಎಚ್.ಸಿ. ಕೊಪ್ಪಳ, ಎಮ್. ಆಂಜನೇಯ, ಎಸ್.ಕೆ. ಅಯ್ಯನಗೌಡರ, ಸಂತೋಷ, ರಾಮೇನಹಳ್ಳಿ, ಕರ್ನಾಚಿ, ಪೂಜಾರ ಸೇರಿದಂತೆ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿದ್ದರು. ನಿಯೋಗದೊಂದಿಗೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಿ.ಬಿ. ಅಸೂಟಿ ಇದ್ದರು.



