ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಹಸೀಲ್ದಾರ ವಾಸುದೇವ ಸ್ವಾಮಿ, ಮುಖ್ಯಾಧಿಕಾರಿ ಮಹೇಶ ಹಡಪದ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಪಿಎಸ್‌ಐ ನಾಗರಾಜ ಗಡಾದ ಅವರು ಪುರಸಭೆಯ ಪೌರ ಕಾರ್ಮಿಕರಿಗೆ ರಾತ್ರಿ ವೇಳೆ ಕೆಲಸ ಮಾಡುವಾದ ಧರಿಸಲು ರಿಪ್ಲೆಕ್ಟರ್ ಸಮವಸ್ತ್ರ ಇತರೇ ರಕ್ಷಣಾ ಕವಚಗಳು ಹಾಗೂ ಸಿಹಿ ವಿತರಿಸುವ ಮೂಲಕ ಹೊಸ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ತಹಸೀಲ್ದಾರರು, ಪೌರ ಕಾರ್ಮಿಕರು ಆರೋಗ್ಯಕರ ಸಮಾಜದ ನಿರ್ಮಾತೃಗಳಾಗಿದ್ದು, ಅವರ ಸೇವೆ ಸ್ಮರಣೀಯ. ಸಮಾಜ ಅವರ ಸ್ವಚ್ಚತಾ ಕಾರ್ಯಕ್ಕೆ ಸಹಕಾರ ನೀಡುವದರೊಂದಿಗೆ ಅವರನ್ನು ಗೌರವಿಸುವ ಕಾರ್ಯ ಮಾಡಬೇಕು. ಪ್ರಸ್ತುತ ದಿನಮಾನಗಳಲ್ಲಿ ಪೌರ ಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಆತಂಕವನ್ನುಂಟು ಮಾಡುತ್ತದೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಸದಸ್ಯರಾದ ರಾಜೀವ ಕುಂಬಿ, ಬಸವರಾಜ ಓದುನವರ, ರಮೇಶ ಗಡದವರ, ವಿಜಯ ಕುಂಬಿ, ನೀಲಪ್ಪ ಪೂಜಾರ, ಸಿದ್ದು ದುರಗಣ್ಣವರ, ಮಂಜುಳಾ ಹೂಗಾರ, ಮಂಜುನಾಥ. ಮುದಗಲ್, ಬಸವೆಣೆಪ್ಪ ನಂದೆಣ್ಣವರ ಹನಮಂತಪ್ಪ ನಂದೆಣ್ಣವರ ಸೇರಿ ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.