ವಿಜಯಸಾಕ್ಷಿ ಸುದ್ದಿ, ಗದಗ : ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳರವರ ಹಾಗೂ ಪದ್ಮಭೂಷಣ ಪಂಡಿತ ಪುಟ್ಟರಾಜ ಕವಿ ಗವಾಯಿಗಳರವರ ಕೃಪಾಶೀರ್ವಾದೊಂದಿಗೆ ಪರಮಪೂಜ್ಯ ಡಾ. ಶ್ರೀ ಕಲ್ಲಯ್ಯಜ್ಜನವರ 54ನೇ ಜನ್ಮದಿನದ ಸಮಾರಂಭದಲ್ಲಿ ನಗರದ ಪ್ರತಿಷ್ಠಿತ ಬಾಲಾಜಿ ಶಾಮಿಯಾನ ಸಪ್ಲಾಯರ್ಸ್ ಮಾಲೀಕರಾದ ಎನ್. ರಾಮರಾವ್‌ರವರು ಪರಮಪೂಜ್ಯ ಕಲ್ಲಯ್ಯಜ್ಜನವರನ್ನು ಸನ್ಮಾನಿಸಿ ಗೌರವಿಸಿದರು.
Advertisement
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಶ್ರೀ ಬಾಲಾಜಿ ಶಾಮಿಯಾನ ವತಿಯಿಂದ ಶಾಮಿಯಾನ ಸೇವೆ ನೆರವೇರಿಸಿದಕ್ಕಾಗಿ ಪರಮಪೂಜ್ಯ ಕಲ್ಲಯ್ಯಜ್ಜನವರು ಶ್ರೀಮಠದ ವತಿಯಿಂದ ಎನ್. ರಾಮರಾವ್‌ರವರನ್ನು ಆಶೀರ್ವದಿಸಿದರು.