ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಬ್ರಾಹ್ಮಣ ಸಂಘ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಳಗುಂದ ಬ್ರಾಹ್ಮಣ ಸಮಾಜದ ಧುರೀಣರು, ಸಮಾಜ ಸುಧಾರಕರಾದ ಶ್ರೀಪಾದ ನಾಯಕ ತಮ್ಮಣ್ಣವರ (ಚಿನಿವಾಲರ) ಇವರನ್ನು ಸನ್ಮಾನಿಸಲಾಯಿತು.
Advertisement
ಶ್ರೀಪಾದ ನಾಯಕ ತಮ್ಮಣ್ಣವರ ಸಮಾಜಸೇವೆಯೊಂದಿಗೆ ಇನ್ನಷ್ಟು ಬೆಳೆಯಲಿ ಎಂದು ಅಭಿಮಾನಿ ಬಳಗದ ಎಂ.ಡಿ. ನರಗುಂದ, ಎ.ಎನ್. ಖಾತಾಖಾನಿ, ಮಂಜು ಮಜ್ಜಿಗುಡ್ಡ, ಸಿ.ಎಸ್. ಪತ್ರಿ, ಮಂಜು ಕುಂಬಾರ, ಕಿರಣ ಬಾತಾಖಾನಿ, ಶಿವಪ್ಪ ಮಡ್ಡಿ, ಬಸುವರಾಜ ವಡ್ಡಟ್ಟಿ ಸೇರಿದಂತೆ ಅಭಿಮಾನಿಗಳು ಹಾರೈಸಿದರು.