ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಸಿದ್ಧಲಿಂಗ ನಗರದ ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ 15ನೇ ವಾರ್ಷಿಕೋತ್ಸವದ ಅಂಗವಾಗಿ ಸದಸ್ಯರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟದ ಫಲಿತಾಂಶ ಕೆಳಗಿನಂತಿದೆ.
ವೇಗದ ನಡಿಗೆ: ಪ್ರಥಮ-ಚೈತ್ರಾ ಹದ್ದಣ್ಣವರ, ದ್ವಿತೀಯ-ಸಂಗೀತಾ ಮಡಿವಾಳರ, ತೃತೀಯ-ವೀಣಾ ಮಾಲಿಪಾಟೀಲ.
ಲಗೋರಿ ಸ್ಟ್ಯಾಂಡ್ ಬೀಳಿಸುವುದು: ಪ್ರಥಮ-ಗೌರಿ ಜೀರಂಕಳಿ, ದ್ವಿತೀಯ-ಜಯಶ್ರೀ ಡಾವಣಗೇರಿ, ತೃತೀಯ-ಸಂಗೀತಾ ಮಡಿವಾಳರ.
ಯೋಗಾಸನ: ಪ್ರಥಮ-ಚೈತ್ರಾ ಹದ್ದಣ್ಣವರ, ದ್ವಿತೀಯ-ಸಂಗೀತಾ ಮಡಿವಾಳರ, ತೃತೀಯ-ರಾಜೇಶ್ವರಿ.
ಯೋಗ ಆಶುಭಾಷ : ಪ್ರಥಮ-ಗೌರಿ ಜೀರಂಕಳಿ, ದ್ವಿತೀಯ-ಭಾರತಿ ಪಾಟೀಲ (ಪಲ್ಲೇದ), ತೃತೀಯ- ವಿಜಯಲಕ್ಷ್ಮೀ ಮೇಕಳಿ.
ಪುಟಾಣಿ-ಕಡ್ಲಿಬೇಳೆ ಬೇರ್ಪಡಿಸುವದು: ಪ್ರಥಮ-ಮಹಾದೇವಿ ಚರಂತಿಮಠ, ದ್ವಿತೀಯ-ಲಲಿತಾ ಕಡಗದ, ತೃತೀಯ-ಸಂಗೀತಾ ನಾಕೋಡ.
ಕ್ರೀಡಾಕೂಟದಲ್ಲಿ ಭಾಗವಹಿಸಿದ ಮತ್ತು ವಿಜೇತರಾದ ಸ್ಪರ್ಧಿಗಳೆಲ್ಲರಿಗೂ ಹಾಗೂ ಬಹುಮಾನ ದಾಸೋಹ ಸೇವೆ ಸಲ್ಲಿಸಿದ ಪಾರ್ವತಿ ಭೂಮಾ, ಶಾಂತಾ ಮುಂದಿನಮನಿ, ಗಿರಿಜಾ ನಾಲತ್ವಾಡಮಠ ಮತ್ತು ಮಾರ್ಗದರ್ಶನ ನೀಡಿದ ಬಸವ ಯೋಗ ಕೇಂದ್ರ ಪ್ರಾಚಾರ್ಯ ಕೆ.ಎಸ್. ಪಲ್ಲೇದ, ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಂ. ಬುರಡಿ ಇವರೆಲ್ಲರಿಗೂ ಕೇಂದ್ರದ ಅಧ್ಯಕ್ಷೆ ಜಯಶ್ರೀ ವಸ್ತದ ಹಾಗೂ ಪದಾಧಿಕಾರಿಗಳು ಅಭಿನಂದನೆ ತಿಳಿಸಿದ್ದಾರೆ.