ಗದಗ ಬೆಂಗಳೂರು ವೋಲ್ವೊ ಬಸ್ ಸೇವೆ ಪುನಾರಂಭಗೊಳಿಸಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಮನವಿ ಮಾಡಿದ್ದಾರೆ.
ಎಕ್ಸ್ ಖಾತೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವರಿಗೆ ಮನವಿ ಮಾಡಿದ್ದಾರೆ. ಈ ಹಿಂದೆ ಸುನೀಲ್ ಜೋಶಿ ಅವರ ಮನವಿ ಮೇರೆಗೆ ಸಾರಿಗೆ ಇಲಾಖೆ ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಆರಂಭಿಸಿತ್ತು. ಆದರೆ ಈಗ ಸೇವೆ ಸ್ಥಗಿತಗೊಂಡಿದ್ದು ಪುನರಾರಂಭಗೊಳಿಸುವಂತೆ ಜೋಶಿ ಮನವಿ ಮಾಡಿದ್ದಾರೆ.
2023ರಲ್ಲೂ ಸುನೀಲ್ ಜೋಶಿಯವರು ಟ್ವೀಟ್ ಮೂಲಕ ವೋಲ್ವೋ ಬಸ್ ಸೇವೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಕ್ರಿಕೆಟಿಗ ಸುನಿಲ್ ಮನವಿಗೆ ಸ್ಪಂದಿಸಿದ್ದ ಆಗಿನ ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಬಸ್ ಸೇವೆ ಕಲ್ಪಿಸಿದ್ದರು.
ಆದ್ರೆ ಕೆಲ ತಿಂಗಳ ನಂತರ ಸಾರಿಗೆ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಈಗ ಮತ್ತೆ ಟ್ವೀಟ್ ಮಾಡಿ ಬಸ್ ಸೇವೆ ಪುನರಾರಂಭಗೊಳಿಸಲು ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉಸ್ತುವಾರಿ ಸಚಿವ ಹೆಚ್ಕೆ ಪಾಟೀಲರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.