ಬೆಂಗಳೂರು:- ಬರಿಗೈಯಲ್ಲಿ ಬಂದ ಕಳ್ಳನೊಬ್ಬ ಬಾಗಿಲು ಮುರಿಯದೇ, ಬೀಗ ಒಡೆಯದೇ ಒಳಗೆ ನುಗ್ಗಿ ಚಿನ್ನದ ಗಣಿಯನ್ನೇ ದೋಚಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
Advertisement
ಬಾಗಲಗುಂಟೆ ರಾಮಯ್ಯ ಬಡಾವಣೆಯಲ್ಲಿ ದರ್ಶನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ವಿಂಡೋ ಓಪನ್ ಮಾಡಿ ಲಾಕ್‌ನ ಸ್ಕ್ರೂ ಬಿಚ್ಚಿ ಮಗನ ಮದುವೆಗೆ ಮನೆಯಲ್ಲಿಟ್ಟಿದ್ದ ಹಣ, ಚಿನ್ನಾಭರಣವನ್ನ ಕಳ್ಳ ಹೊತ್ತೊಯ್ದಿದ್ದಾನೆ. 45 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಮೂರು ಲಕ್ಷ ನಗದು ದೋಚಿ ಪರಾರಿಯಾಗಿದ್ದಾನೆ. ಒಂದೂವರೆ ಗಂಟೆಗಳ ಕಾಲ ಮನೆಯ ಮೂಲೆ ಮೂಲೆ ಹುಡುಕಿರುವ ಖತರ್ನಾಕ್ ಕಳ್ಳ, ಬರುವಾಗ ಬರಿಗೈಲಿ ಬಂದು ವಾಪಸ್ ಆಗುವಾಗ ಬ್ಯಾಗ್ ಸಮೇತ ಹೋಗುವ ದೃಶ್ಯ ಲಭ್ಯವಾಗಿದೆ.
300 ಗ್ರಾಂ ಗೋಲ್ಡ್, 10 ಲಕ್ಷ ಬೆಲೆ ಬಾಳುವ ಬೆಳ್ಳಿ, 3ಲಕ್ಷ ನಗದು ಒಂದು ಹೊಸ ಮೊಬೈಲ್ ಬಾಕ್ಸ್ ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


