ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡಗಳ ನಿವೃತ್ತ ನೌಕರರ ಗದಗ ಸಂಘವನ್ನು ಸ್ಥಾಪಿಸಲಾಗಿದೆ.
ಸಂಘದ ಗೌರವ ಅಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ದೇವಪ್ಪ ಗಾಳೆಪ್ಪ ಜೋಗಣ್ಣವರ, ಅಧ್ಯಕ್ಷರಾಗಿ ಹನಮಪ್ಪ ಎಚ್.ದೊಡ್ಡಮನಿ, ಉಪಾಧ್ಯಕ್ಷರಾಗಿ ಬಸವಪ್ಪ ಎ.ದೊಡ್ಡಮನಿ, ಬಸಪ್ಪ ಜಿ.ಕೆಂಗಾರಕರ, ಪರಸಪ್ಪ ಎನ್.ಜಿಗಳೂರ, ಕಾರ್ಯದರ್ಶಿಯಾಗಿ ಹನಮಂತಪ್ಪ ಸಿ.ಕೊಪ್ಪಳ, ಖಜಾಂಚಿಯಾಗಿ ಬಸವರಾಜ ಕೆ.ಹೊಸಮನಿ, ಆಡಳಿತ ಮಂಡಳಿಯ ಸದಸ್ಯರಾಗಿ ಮಂಜಪ್ಪ ಎಚ್.ಸಾಲಿ, ತಾರಕೇಶ್ವರ ಎಚ್.ಕಜ್ಜರಿ, ಅಶೋಕ ಬೆಣಗಿ ಹಾಗೂ ಸಹ ಕಾರ್ಯದರ್ಶಿಯಾಗಿ ಆನಂದ ಅವರನ್ನು ಆಯ್ಕೆ ಮಾಡಲಾಗಿದೆ.
ಸರ್ಕಾರದ ಸೌಲಭ್ಯ ಒದಗಿಸುವ, ಶೈಕ್ಷಣಿಕ, ಸ್ವಯಂ ಉದ್ಯೋಗ, ಟೇಲರಿಂಗ್, ಕಸೂತಿ, ಗೃಹಕೈಗಾರಿಕೆ, ಬಡಿಗತನ, ಕಂಪ್ಯೂಟರ್ ಸೆಂಟರ್, ಇಂಟರ್‌ನೆಟ್ ಸೆಂಟರ್ ಸ್ಥಾಪಿಸುವುದು ಹಾಗೂ ಸ್ವಯಂ ಉದ್ಯೋಗ ಮಾಹಿತಿ ಕೇಂದ್ರ ಹೀಗೆ ಸಮಾಜಮುಖಿ ಮತ್ತು ಜನಮುಖಿಯಾಗಿ ಕಾರ್ಯ ಮಾಡುವ ಉದ್ದೇಶವನ್ನು ಸಂಘವು ಹೊಂದಿದೆ ಎಂದು ಕಾರ್ಯದರ್ಶಿ ಎಚ್.ಸಿ. ಕೊಪ್ಪಳ ತಿಳಿಸಿದ್ದಾರೆ.



