ರಾಮನಗರ:– ರಾಮನಗರದ ಮಂಜುನಾಥ ಬಡಾವಣೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ ಎಸಗಿದ ಆರೋಪದಡಿ ನಿವೃತ್ತ ಲೋಕೋಪೈಲೆಟ್ ಅನ್ನು ಅರೆಸ್ಟ್ ಮಾಡಲಾಗಿದೆ.
71 ವರ್ಷದ ನಿವೃತ್ತ ಲೋಕೋಪೈಲೆಟ್ ಶಿವಕುಮಾರ್ ಬಂಧಿತ ಆರೋಪಿ. ರಾಮನಗರದ ಮಂಜುನಾಥ ಬಡಾವಣೆ ನಿವಾಸಿ ಶಿವಕುಮಾರ್, ನನಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಗೊತ್ತು, ನಿಮ್ಮ ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಸಾವಿತ್ರಮ್ಮ ಹಾಗೂ ಶಿವಣ್ಣ ಎಂಬುವವರಿಂದ 15 ಲಕ್ಷ ರೂ.ಗೂ ಹೆಚ್ಚು ಹಣ ಪಡೆದಿದ್ದರು.
ಬಳಿಕ ನಕಲಿ ಸೀಲು ಹಾಗೂ ಸೈನ್ ಬಳಸಿ ಹಣ ಕೊಟ್ಟವರಿಗೆ ಪತ್ರ ಬರೆದಿದ್ದ ಶಿವಕುಮಾರ್, ಇನ್ನೆರಡು ತಿಂಗಳಲ್ಲಿ ನೇಮಕಾತಿ ಪತ್ರ ಬರುತ್ತೆ ಎಂದು ಸುಳ್ಳು ಹೇಳಿದ್ದರು. ಎರಡು ತಿಂಗಳಾದರೂ ಯಾವುದೇ ನೇಮಕಾತಿ ಪತ್ರ ಬಾರದ ಹಿನ್ನೆಲೆ ಹಣ ಕೊಟ್ಟ ಸಾವಿತ್ರಮ್ಮ ಮತ್ತು ಶಿವಣ್ಣ ಅವರು ಶಿವಕುಮಾರ್‌ರನ್ನ ಸಂಪರ್ಕಿಸಲು ಮುಂದಾದಾಗ ಶಿವಕುಮಾರ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಈ ಬಗ್ಗೆ ವಿಚಾರಿಸಿದಾಗ ವಂಚನೆ ಆಗಿರೋದು ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಪೊಲೀಸರು, ಆರೋಪಿ ಶಿವಕುಮಾರ್‌ನನ್ನ ಬಂಧಿಸಿದ್ದಾರೆ.



