ಕಲಬುರಗಿ:- ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿವೃತ್ತ ನರ್ಸ್ ಯಡವಟ್ಟಿಗೆ ತಾಯಿ, ನವಜಾತ ಶಿಶು ಬಲಿಯಾಗಿರುವ ಘಟನೆ ಜರುಗಿದೆ.
Advertisement
28 ವರ್ಷದ ಶ್ರೀದೇವಿ ಪ್ರಭಾನೂರ್, ನವಜಾತ ಶಿಶು ಮೃತಪಟ್ಟಿದೆ. ಮಹಿಳೆ ನಿವೃತ ಆರೋಗ್ಯ ಸಹಾಯಕಿ ಗಂಗುಬಾಯಿ ಬಳಿ ಹೆರಿಗೆಗೆ ದಾಖಲಾಗಿದ್ದಳು. ಈ ವೇಳೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. ನಿವೃತ್ತ ನರ್ಸ್ ಯಡವಟ್ಟಿನಿಂದಲೇ ತಾಯಿ ಹಾಗೂ ಮಗು ಮೃತಪಟ್ಟಿದೆ. ಈ ಸಂಬಂಧ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮೃತ ಶ್ರೀದೇವಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಈ ಬಾರಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.