ದೇಶ ರಕ್ಷಣೆಗೆ ಮಕ್ಕಳನ್ನು ಕಳುಹಿಸಿ : ಸಿದ್ದಲಿಂಗ ಸ್ವಾಮಿಗಳು

0
Retired soldiers parade program
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ದೇಶದ ರಕ್ಷಣೆಯಲ್ಲಿ ಪ್ರತಿಯೊಬ್ಬರ ಸೇವೆ ಅವಶ್ಯವಾಗಿದ್ದು, ದೇಶದ ಗಡಿ ಕಾಯಲು ತಮ್ಮ ಮಕ್ಕಳನ್ನು ಕಳುಹಿಸಬೇಕು ಎಂದು ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗ ಸ್ವಾಮಿಗಳು ಸಲಹೆ ನೀಡಿದರು.

Advertisement

ಇಲ್ಲಿಯ ಅನ್ನದಾನೀಶ್ವರ ಮಠದ ಸಭಾಭವನದಲ್ಲಿ ಮೂವರು ಯೋಧರ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದ ನಿಮಿತ್ತ ಹಾಲಿ ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘವು ಏರ್ಪಡಿಸಿದ್ದ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ದತ್ತಾತ್ರೇಯ ಜೋಶಿ ಮಾತನಾಡಿ, ಬಿಸಿಲು, ಚಳಿ, ಮಳೆಯನ್ನು ಲೆಕ್ಕಿಸದೇ ತಮ್ಮ ಪ್ರಾಣದ ಹಂಗನ್ನೂ ತೊರೆದು ದೇಶ ರಕ್ಷಣೆಯಲ್ಲಿ ತಮ್ಮ ಸೇವೆ ಸಲ್ಲಿಸಿ ಗ್ರಾಮಕ್ಕೆ ಆಗಮಿಸಿರುವ ಮೂವರು ಯೋಧರ ದೇಶಪ್ರೇಮ ಶ್ಲಾಘನೀಯ. ತಮ್ಮ ಕುಟುಂಬವನ್ನು ಬಿಟ್ಟು ದೇಶದ ಗಡಿ ಭಾಗದಲ್ಲಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ. ಅವರನ್ನು ಈ ಸಮಾಜ ಗೌರವದಿಂದ ಕಾಣುವುದರೊಂದಿಗೆ ಅವರ ಸೇವೆಯನ್ನು ಸ್ಮರಿಸಬೇಕು.

ದೇಶ ಸೇವೆಗಾಗಿ ತಮ್ಮ ಕುಟುಂಬದ ಸದಸ್ಯನೊಬ್ಬನನ್ನು ಧ್ಯೆರ್ಯದಿಂದ ಕಳಿಸಿಕೊಟ್ಟ ಕುಟುಂಬದ ತ್ಯಾಗವೂ ಸ್ಮರಣೀಯವಾಗಿದೆ. ನಿವೃತ್ತ ಯೋಧರು ತಮ್ಮ ತಂದೆ-ತಾಯಿ, ಪತ್ನಿ, ಮಕ್ಕಳೊಂದಿಗೆ ನಿವೃತ್ತ ಜೀವನವನ್ನು ಸಂತಸದಿಂದ ಕಳೆದು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ನಿವೃತ್ತರಾಗಿ ಬಂದ ಅಶೋಕ ಮದ್ನೂರ, ಮುತ್ತಪ್ಪ ಕರೆಕಲ್ಲ, ಶಂಭುಲಿಂಗಪ್ಪ ಮುಸ್ಕಿನಭಾವಿ ಅವರು ತಮ್ಮ ಸೈನಿಕ ಸೇವಾ ಅನುಭವವನ್ನು ಹಂಚಿಕೊಂಡರು. ಮೂವರು ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೂ ಪೂರ್ವ ಭೀಮಾಂಬಿಕಾ ದೇವಸ್ಥಾನದಿಂದ ಅನ್ನದಾನೀಶ್ವರ ಮಠದವರೆಗೂ ಯೋಧರನ್ನು ಮೆರವಣಿಗೆ ಮಾಡಲಾಯಿತು.

ಸಂಘದ ಗೌರವಾಧ್ಯಕ್ಷ, ಮಾಜಿ ಸೈನಿಕರಾದ ಪಿ.ಎಸ್. ಗುಂಡಳ್ಳಿ, ಉಪಾಧ್ಯಕ್ಷ ಮಹಾಂತೇಶ ಚವಡಿ, ಶರಣಯ್ಯ ಗಂಧದ, ಸಂಜೀವ ಚಿಮನಕಟ್ಟಿ, ಮಂಗಳೇಶ ವಸ್ತçದ, ಚಂದ್ರು ಯಾವಗಲ್, ಅಂದಾನಯ್ಯ ನರಗುಂದಮಠ, ದೇವೇಂದ್ರಪ್ಪ ತಹಸೀಲ್ದಾರ, ಹನುಮಂತಪ್ಪ ಭಜಂತ್ರಿ, ಈಶ್ವರಪ್ಪ ಕುಂಬಾರ, ಈರಣ್ಣ ತಡಹಾಳ ವೇದಿಕೆಯಲ್ಲಿದ್ದರು. ವಿಜಯ ಬಡಿಗೇರ ಸ್ವಾಗತಿಸಿದರು. ಬಸವರಾಜ ಕುಕನೂರು ನಿರೂಪಿಸಿದರು. ಶಿವಪ್ಪ ಬಾಳಿತೋಟ ವಂದಿಸಿದರು.

ದೇಶ ರಕ್ಷಣೆಯಲ್ಲಿ ಸೈನಿಕರ ಸೇವೆ ಮಹತ್ವದ್ದಾಗಿದ್ದು, ನಿವೃತ್ತಿ ಹೊಂದಿ ಗ್ರಾಮಕ್ಕೆ ಬಂದವರು ಕನಿಷ್ಠ ಹತ್ತು ಯುವಕರನ್ನು ದೇಶ ರಕ್ಷಣೆಗೆ ತೆರಳಲು ತರಬೇತಿ ನೀಡಬೇಕು. ಅಂದಾಗ ಮಾತ್ರ ತಮ್ಮ ನಿವೃತ್ತ ಜೀವನ ಸಾರ್ಥಕವಾಗುತ್ತದೆ ಎಂದು ಸಿದ್ದಲಿಂಗ ಸ್ವಾಮಿಗಳು ಅಭಿಪ್ರಾಯಪಟ್ಟರು.


Spread the love

LEAVE A REPLY

Please enter your comment!
Please enter your name here