ಕಟ್ಟಿಮನಿಯವರ ಕರ್ತವ್ಯನಿಷ್ಠೆ ಅನನ್ಯ : ಆರ್.ಎಸ್. ಬುರಡಿ

0
Retired teacher S.M. Kattimani's felicitation ceremony
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಉತ್ತಮ ಬೋಧನೆ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಕಲಿಕೆಗೆ ಪ್ರೇರಣೆಯ ಮೂಲಕ ನೂರಾರು ವಿದ್ಯಾರ್ಥಿಗಳ ಬದುಕು ಕಟ್ಟಿಕೊಟ್ಟು ತಾವು ಸೇವೆ ಸಲ್ಲಿಸಿದ ಪ್ರತಿಯೊಂದು ಶಾಲೆಗಳಲ್ಲಿಯೂ ಪ್ರಾಮಾಣಿಕ ಮತ್ತು ಕರ್ತವ್ಯನಿಷ್ಠೆಯಿಂದ ಕೆಲಸ ಮಾಡಿ ಎಸ್.ಎಮ್. ಕಟ್ಟಿಮನಿ ವಿದ್ಯಾರ್ಥಿಗಳ ಮತ್ತು ಪಾಲಕರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ ಎಂದು ಗದಗ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಎಸ್. ಬುರಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಿರಂತರ ಪ್ರಕಾಶನ ಗದಗ ಮತ್ತು ಎಸ್.ಎಮ್. ಕಟ್ಟಿಮನಿ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಗದಗ ಗ್ರಾಮೀಣ ವಲಯದ ಚಿಕ್ಕೊಪ್ಪ ಶಾಲೆಯ ನಿವೃತ್ತ ಶಿಕ್ಷಕ ಎಸ್.ಎಮ್. ಕಟ್ಟಿಮನಿಯವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತನಾಡಿದ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ, ಶಿಕ್ಷಕರಾದವರು ಸಮಯ ನಿಷ್ಠೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ. ಅಂತಹ ಸಂತೃಪ್ತ ಕಾರ್ಯ ಎಸ್.ಎಮ್ ಕಟ್ಟಿಮನಿಯವರಿಂದ ಸಾಧನೆಗೊಂಡಿರುವದು ಸಂತಸ ಸಂಗತಿ ಎಂದರು.

ಗದಗ ಡೈಟ್ ಉಪನ್ಯಾಸಕಿ ಸುಧಾ ಬನ್ನಿಕಲ್ ಎಸ್.ಎಮ್. ಕಟ್ಟಿಮನಿಯವರ ಪರವಾಗಿ ಅಭಿನಂದನಾ ನುಡಿಗಳನ್ನಾಡಿದರು. ನಿರಂತರ ಪ್ರಕಾಶನದ ಸಂಸ್ಥಾಪಕ, ಹಿರಿಯ ಸಾಹಿತಿ ಎ.ಎಸ್. ಮಕಾಂದಾರ ಕಟ್ಟಿಮನಿಯವರ ಬದುಕಿನ ಅನೇಕ ಘಟನೆಗಳನ್ನು ಉಲ್ಲೇಖಿಸಿದರು.

ಡಿಡಿಪಿಐ ಕಛೇರಿಯ ಎಪಿಸಿಓ ಶಿವಕುಮಾರ ಕುರಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶನ ಸದಸ್ಯ ಬಿ.ಎನ್. ಯರನಾಳ, ನಿವೃತ್ತ ಕನ್ನಡ ಪ್ರಾಧ್ಯಾಪಕ ಎಸ್.ಐ. ಯಾಳಗಿ, ನರಸಾಪೂರ ಶಾಲೆಯ ಪ್ರಧಾನ ಗುರುಗಳಾದ ಬಿ.ಡಿ. ಮಾದರ, ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಉಪಸ್ಥಿತರಿದ್ದರು. ಶಿಕ್ಷಕಿ ಅನ್ನಪೂರ್ಣ ಕೊಟಗಿ, ಶೋಭಾ ಗೌಡರ ಪ್ರಾರ್ಥಿಸಿದರು. ಪ್ರಧಾನ ಗುರುಗಳಾದ ಬಿ.ವಾಯ್. ಡೊಳ್ಳಿನ ಸ್ವಾಗತಿಸಿದರು. ಕ.ರಾ.ಪ್ರಾ.ಶಾ ಶಿಕ್ಷಕರ ಸಂಘದ ನಿರ್ದೇಶಕ ವಿರೇಶ ವಾಲ್ಮೀಕಿ ವಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್.ಎಮ್. ಕಟ್ಟಿಮನಿ, ನನ್ನ ವೃತ್ತಿ ಬದುಕಿನಲ್ಲಿ ನನಗೆ ಸೇವೆ ಮಾಡಲು ಸಿಕ್ಕ ಅವಕಾಶಗಳನ್ನು ಬಹಳ ತೃಪ್ತಿಯಿಂದ ನಿರ್ವಹಣೆ ಮಾಡಿದ ಖುಷಿಯಿದೆ. ನನ್ನ ಪಾಲಿನ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ ಪವಿತ್ರ ಶಿಕ್ಷಕ ವೃತಿಗೆ ನ್ಯಾಯ ಒದಗಿಸಿದ ಸಂತಸವಿದೆ. ಇದಕ್ಕೆ ನನ್ನ ಕುಟುಂಬವರ್ಗದವರ ಸಹಕಾರವೂ ಪ್ರೇರಣೆ ಎಂದರು.


Spread the love

LEAVE A REPLY

Please enter your comment!
Please enter your name here