ಗದಗ: ಗದಗ ಸಮೀಪದ ತಿಮ್ಮಾಪೂರ ಗ್ರಾಮದ ಕೆವಿಎಸ್‌ಆರ್ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರಾದ ಎಚ್.ಎಸ್. ಕುರಿ, ವಿ.ಆರ್. ಹುಯಿಲಗೋಳ, ಟಿ.ವಾಯ್. ಕುರಿ, ವಿ.ಬಿ. ದೇಶಪಾಂಡೆ, ಎಸ್.ಎ. ಕಮ್ಮಾರ ಇವರನ್ನು ಶಿಷ್ಯರು ಮನೆ ಮನೆಗೆ ತೆರಳಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕೆವಿಎಸ್‌ಆರ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಣ್ಣ ಕುರಡಗಿ, ಸೋಂಪೂರ ಪ್ರೌಢಶಾಲೆಯ ಶಿಕ್ಷಕರಾದ ಆರ್.ಬಿ. ಅಬ್ಬಿಗೇರಿ, ಭಾಸ್ಕರ್ ಪತ್ತಾರ, ಐ.ಕೆ. ಶಾಂತಗೇರಿ ಪಾಲ್ಗೊಂಡಿದ್ದರು.
Advertisement