ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧರಿಸುವುದರಿಂದ ಭಾರಿ ಮಹತ್ವ ಪಡೆದುಕೊಂಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್ಗಳಿವೆ.
ಈ ನಾಲ್ಕು ಕೇಸ್ಗಳ ಪೈಕಿ ಈಗ ಮೊದಲ ಕೇಸ್ ತೀರ್ಪು ಪ್ರಕಟವಾಗುತ್ತಿದೆ.ಇಂದು ಪ್ರಜ್ವಲ್ ಅಪರಾಧಿಯೋ ಅಥವಾ ಅಲ್ಲವೋ ಎಂದು ಕೋರ್ಟ್ ಮೊದಲಿಗೆ ತೀರ್ಪು ನೀಡಲಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಸಂತ್ರಸ್ತೆ ಕೊಟ್ಟ ಹೇಳಿಕೆ ನೀಡಿದ್ದಾರೆ.
ಜೊತೆಗೆ ಪ್ರಜ್ವಲ್ ತಾನೇ ಚಿತ್ರೀಕರಿಸಿಕೊಂಡಿದ್ದ ವಿಡಿಯೋ, ಪೋಟೋಗಳು ಕೂಡ ಸಾಕ್ಷ್ಯಗಳಾಗಿವೆ. ಪ್ರಜ್ವಲ್ ಮಾಜಿ ಕಾರ್ ಚಾಲಕ ಕಾರ್ತಿಕ್ ಕೂಡ ಈ ಕೇಸ್ನಲ್ಲಿ ಸಾಕ್ಷಿ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿಯೊಂದು ಕ್ರಿಮಿನಲ್ ರೇಪ್ ಕೇಸ್ನಲ್ಲಿ ಅಪರಾಧಿಯಾಗುತ್ತೋ, ಇಲ್ಲವೋ ಅನ್ನೋದು ಇಂದು ನಿರ್ಧಾರವಾಗಲಿದೆ.