ಮಂಡ್ಯ:- ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಂಡ್ಯದಲ್ಲಿ ಮಾತನಾಡಿದ ಅವರು, ದೆಹಲಿ ಫಲಿತಾಂಶದಲ್ಲಿ ವಿಶೇಷ ಏನಿಲ್ಲ. ಕೇಜ್ರಿವಾಲ್ ಇಂಡಿಯಾ ಒಕ್ಕೂಟದ ಜೊತೆ ಹೋಗಿದ್ದರೆ ಬಿಜೆಪಿಗೆ ಗೆಲ್ಲುವ ಅವಕಾಶ ಇರಲಿಲ್ಲ. ಆದರೆ ಕೇಜ್ರಿವಾಲ್ ಸ್ವಲ್ಪ ದುಡುಕಿ ನಿರ್ಧಾರ ಮಾಡಿದರು. ಹೀಗಾಗಿ ಆಪ್, ಕಾಂಗ್ರೆಸ್ ನಿರ್ಧಾರದಿಂದ ಬಿಜೆಪಿ ಲಾಭ ಪಡೆದಿದೆ ಎಂದರು.
ರಾಜ್ಯ ಬಜೆಟ್ ವಿಚಾರವಾಗಿ ಮಾತನಾಡಿ, ಕಳೆದ ಬಾರಿಯೂ ಕೃಷಿ ಇಲಾಖೆಗೆ ಹೊಸ ಕಾರ್ಯಕ್ರಮಗಳ ಮೂಲಕ ಉತ್ತೇಜನ ನೀಡಿದ್ದರು. ಈ ಬಾರಿಯೂ ಉತ್ತಮ ಕಾರ್ಯಕ್ರಮಗಳು ಸಿಗುವ ನಿರೀಕ್ಷೆ ಇದೆ. ಇನ್ನೂ ಸಚಿವಾಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಸಮಾಧಾನಪಡಿಸಿರುವ ವಿಚಾರವಾಗಿ, ಸಚಿವಾಕಾಂಕ್ಷಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿದೆ. ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಛೇರ್ಮನ್ ಒಳ್ಳೆಯ ಹುದ್ದೆಯಾಗಿದ್ದು, ರಾಜ್ಯಾದ್ಯಂತ ಕೆಲಸ ಮಾಡಲು ಉತ್ತಮ ಅವಕಾಶವಿದೆ. ನರೇಂದ್ರ ಸ್ವಾಮಿಯವರು ಎಂಜಿನಿಯರ್ ಆಗಿದ್ದರಿಂದ ಅವಕಾಶ ಸಿಕ್ಕಿದೆ ಎಂದರು.