ಬೆಂಗಳೂರು:- ನಿವೃತ್ತ ಡಿಜಿ, ಐಜಿಪಿ ಓಂಪ್ರಕಾಶ್ ಕೊಲೆಗೆ ಸ್ಫೋಟಕ ಕಾರಣ ಬಯಲಾಗಿದೆ. ಈಗಾಗಲೇ ತನಿಖೆ ಕೊನೆ ಹಂತಕ್ಕೆ ತಲುಪಿದ್ದು, ಸ್ಫೋಟಕ ಕಾರಣಗಳು ರಿವಿಲ್ ಆಗಿದೆ.
ಕುಟುಂಬದ ಬಗ್ಗೆ ತೋರಿದ ನಿರ್ಲಕ್ಷ್ಯ, ತನ್ನ ಸ್ವಂತ ಕುಟುಂಬಕ್ಕಿಂತಲೂ ತಂಗಿ ಕುಟುಂಬಕ್ಕೆ ಓಂಪ್ರಕಾಶ್ ಹೆಚ್ಚು ಒತ್ತು ಕೊಡುತ್ತಿದ್ದರಂತೆ, ಮಗಳಿಗೆ ಮದುವೆ ಮಾಡ್ತಿಲ್ಲ. ಹೀಗೆ ಸಿಸಿಬಿ ಮಾಡಿದ ತನಿಖೆ ವೇಳೆ ಓಂಪ್ರಕಾಶ್ ಕೊಲೆಗೆ ಹಲವು ಕಾರಣಗಳು ಬಹಿರಂಗವಾಗಿದೆ. ಕೌಟುಂಬಿಕ ಕಾರಣಗಳಿಂದಲೇ ಪತಿ ಓಂಪ್ರಕಾಶ್ ಅವರನ್ನ ಪತ್ನಿ ಪಲ್ಲವಿ ಕ್ರೂರವಾಗಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.
ಸಿಸಿಬಿ ತನಿಖೆ ವೇಳೆ ಸಿಕ್ಕ 9 ಕಾರಣಗಳು ಈ ಕೆಳಗಿನಂತಿವೆ:
1. ತನ್ನ ಬಗ್ಗೆ ವೈಯುಕ್ತಿಕವಾಗಿ ಗಮನ ಹರಿಸಿಲ್ಲ ಎಂದು ಆರೋಪಿಸಿರುವ ಪಲ್ಲವಿ.
2. ಮಗಳಿಗೆ ಮದುವೆ ಮಾಡಿಲ್ಲ ಎಂದು ಕೋಪ.
3. ತನ್ನ ಭಾಗದ ಕುಟುಂಬದ ಬಗ್ಗೆ ಹೆಚ್ಚು ಗಮನವಹಿಸ್ತಿದ್ದ ಓಂ ಪ್ರಕಾಶ್.
4. ಮನೆ ಸಮಸ್ಯೆಗಳಾದಾಗ ನೇರವಾಗಿ ಸಹೋದರಿ ಮನೆಗೆ ತೆರಳ್ತಿದ್ದರು.
5. ಐಶಾರಮಿ ಮನೆಯಲ್ಲಿದ್ರು ಮಗಳ ಕೈಗೆ ಖರ್ಚಿಗೆ ಹಣ ಕೊಡುತ್ತಿರಲಿಲ್ಲ.
6. ಸಂಪೂರ್ಣ ಹಣದ ವ್ಯವಹಾರವನ್ಮ ಓಂ ಪ್ರಕಾಶ್ ಒಬ್ಬರೇ ನೋಡಿಕೊಳ್ಳುತ್ತಿದ್ರು.
7. ಈ ಹಿಂದೆ ಕೆಲ ಬಾರಿ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಪಲ್ಲವಿ.
8. ಜಗಳದಿಂದ ನೊಂದು ಓಂ ಪ್ರಕಾಶ್ ತನ್ನನ್ನು ಕೊಲೆ ಮಾಡಬಹುದು ಎಂದೆಲ್ಲಾ ಯೋಚಿಸುತಿದ್ದ ಪಲ್ಲವಿ.
9. ತಾನು ಕೊಲೆಯಾಗುವ ಬದಲು ತಾನೇ ಅವರನ್ನ ಕೊಲೆ ನಿರ್ಧಾರ ಮಾಡಿದ್ದ ಪಲ್ಲವಿ.
ಈ ಎಲ್ಲಾ ಕಾರಣಗಳಿಂದ ಗಂಡನ ಮೇಲೆ ಪಲ್ಲವಿಗೆ ದ್ವೇಷ ಹುಟ್ಟಿಸಿಕೊಂಡಿತು. ಅಲ್ಲದೇ ಎಲ್ಲಾ ವಿಚಾರಗಳಿಂದ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರು. ಕೊನೆಗೆ ಓಂಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರ ತನಿಖೆ ವೇಳೆ ಈ ಎಲ್ಲಾ ಕಾರಣಗಳು ಬಟಾ ಬಯಲಾಗಿದೆ.