ಗದಗ:- ಜನವರಿಯಲ್ಲಿ ಸಂಕ್ರಾಂತಿ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ಆದ್ರೆ ನವೆಂಬರ್‌ನಲ್ಲಿ ಕ್ರಾಂತಿ ಆಗೋದು ನೂರಕ್ಕೆ ನೂರರಷ್ಟು ಖಚಿತ ಎಂದು ಮಾಜಿ ಸಚಿವ ಬಿ ಶ್ರೀ ರಾಮುಲು ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ನವೆಂಬರ್ ತಿಂಗಳಲ್ಲಿ ದೊಡ್ಡ ಬದಲಾವಣೆ ಖಚಿತ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ನವೆಂಬರ್ ನಲ್ಲಿ ಕ್ರಾಂತಿ ಆಗುತ್ತೆ ಅಂತ..! ಆದರೆ ನಮಗೆ ಗೊತ್ತಿಲ್ಲ – ನವೆಂಬರ್ ನಲ್ಲಿ ಕ್ರಾಂತಿ ಆಗುತ್ತೋ, ಜನವರಿಯಲ್ಲಿ ಸಂಕ್ರಾಂತಿ ಬರುತ್ತೋ ಎಂದು ವ್ಯಂಗ್ಯವಾಡಿದರು.
ಇನ್ನೂ ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಖಾಲಿಯಾಗುತ್ತೆ ಅದು ಗ್ಯಾರಂಟಿ. ಯಾಕೆ ಮುಖ್ಯಮಂತ್ರಿಗಳು ಗಾಬರಿಯಾಗಿದ್ದಾರೋ ಗೊತ್ತಿಲ್ಲ. ನಾನು ಬಹಳಷ್ಟು ಬಾರಿ ನೋಡಿದ್ದಾಗ ಅವರ ಶಾಸಕರು ಹೇಳುತ್ತಿದ್ರು. ಮುಖ್ಯಮಂತ್ರಿಗಳು ನಮಗೆ ಕವಡೆ ಕಾಸಿನ ಕಿಮ್ಮತ್ತು ಕೊಡೋದಿಲ್ಲ. ಯಾವುದೇ ಶಾಸಕರಿಗೆ ಗೌರವ ಕೊಡೋದಿಲ್ಲ, ಅನುದಾನ ಬಿಡುಗಡೆ ಮಾಡಿಲ್ಲ ಅಂತ. ಆದ್ರೆ ಜೀವನದಲ್ಲಿ ರಾಜಕಾರಣಿಗಳಿಗೆ ಗೌರವ ಬಹಳಷ್ಟು ಮುಖ್ಯ ಆಗುತ್ತೆ ಎಂದರು.
ದಿಢೀರ್ ಶಾಸಕರ ಮೇಲೆ ಪ್ರೀತಿ ಬಂದಿದೆ:
ಕಾಂಗ್ರೆಸ್ ನ 130 ಕ್ಕೂ ಹೆಚ್ಚು ಶಾಸಕರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ನವರಿಗೆ ಈವಾಗ ಶಾಸಕರ ಮೇಲೆ ಪ್ರೀತಿ ಬಂದಿದೆ. ಏನು ಈವಾಗ ನವೆಂಬರ್ ನಲ್ಲಿ ಕ್ರಾಂತಿ ಆಗುತ್ತೆ ಅಂತಾ ಪ್ರೀತಿ ಬಂದಿದೆಯೋ ಗೊತ್ತಿಲ್ಲ ಒಟ್ಟು ಪ್ರೀತಿ ಬಂದಿದೆ. ದಿಢೀರ್ ಔತಣಕೂಟಕ್ಕೆ ಬರಬೇಕೆಂದು ಸಿಎಮ್ ಆದೇಶ ಮಾಡಿದ್ದಾರೆ. 13ನೇ ತಾರೀಖಿನಿಂದ ಔತಣಕೂಟ ಆರಂಭವಾಗುತ್ತೆ. ನವೆಂಬರ್ ನಲ್ಲಿ ಅಧಿಕಾರ ಹಸ್ತಾಂತರ ಆಗುತ್ತೆ ಅಂತಾ ಮಾಧ್ಯಮದಲ್ಲಿ ಚರ್ಚೆ ಆಗುತ್ತಿದೆ.
ಸಿಎಂ ಅವರು ಔತಣಕೂಟದಲ್ಲಿ ಎಲ್ಲಾ ಚರ್ಚೆ ಆಗೇ ಆಗುತ್ತವೆ. ಶಾಸಕರು-ಸಚಿವರು ಕಡ್ಡಾಯವಾಗಿ ಬರಬೇಕೆಂದು ತೀರ್ಮಾನ ತಗೆದುಕೊಂಡಿದ್ದಾರೆ. ನೂರಕ್ಕೆ ನೂರರಷ್ಟು ಕ್ರಾಂತಿ ಆಗೇ ಆಗುತ್ತೇ ಇದು ನಮ್ಮ ಬಿಜೆಪಿ ವಾದ. ಪುನಃ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನ ಮುಖ್ಯಮಂತ್ರಿ ಮಾಡಬೇಕೆಂಬ ಚರ್ಚೆ ನಡೆಯುತ್ತಿವೆ.
ಸಿಎಂ ಸಿದ್ದರಾಮಯ್ಯ ರಿಂದ ಬ್ಲ್ಯಾಕ್ ಮೇಲ್:
ಔತಣಕೂಟಕ್ಕೆ ಯಾವುದೇ ಕ್ಯಾಬಿನೆಟ್ ನ ಮಂತ್ರಿಗಳು ತಪ್ಪಿಸಬಾರದೆಂದು ಸಿಎಂ ಆದೇಶ ಮಾಡಿದ್ದಾರೆ. ಸಚಿವ ಸಂಪುಟದಲ್ಲಿರುವ ಸಚಿವರು ಆಕಸ್ಮಿಕವಾಗಿ ಬರೋಲ್ಲ ಅಂತ ಹೇಳಿದ್ರೆ ಸಚಿವ ಸಂಪುಟದಿಂದ ನಿಮ್ಮನ್ನು ತೆಗೆದು ಹಾಕುತ್ತೇನೆಂದು ಸಿಎಂ ಬ್ಲಾಕ್ ಮೇಲ್ ಮಾಡಿದ್ದಾರಂತೆ. ಸಿಎಮ್ ಬ್ಲಾಕ್ ಮೇಲ್ ಮಾಡಿರುವ ಕಾರಣ ಎಲ್ಲರೂ ಹೋಗುತ್ತಿರುವ ಬಗ್ಗೆ ಚರ್ಚೆ ಆಗುತ್ತಿದೆ. ಒಟ್ಟಾರೆ ನವೆಂಬರ್ ನಲ್ಲಿ ಕ್ರಾಂತಿ ಆಗೇ ಆಗುತ್ತೇ .. ಜನವರಿಯಲ್ಲಿ ಸಂಕ್ರಾಂತಿ ಆಗೇ ಆಗುತ್ತೇ.. ಇದು ನಮಗೆ ಕಾಣುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಎಸ್ ವಿ. ಸಂಕನೂರು, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ ಸೇರಿದಂತೆ ಅನೇಕ ಮುಖಂಡರಿದ್ದರು.