ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಆಯುಷ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶರಾವತಿ ಶಶಿಕುಮಾರ್ ನಿರ್ಮಿಸಿರುವ ಚಿತ್ರ `ರಿಕ್ಷಾ ಚಾಲಕ’ ಎ.18ರಿಂದ ತೆರೆ ಕಾಣುತ್ತಿದೆ.
ಆಯುಷ್ ಶಶಿಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವು, ಕೊರೋನಾ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ಆದಾಗ ಆಟೋ ಚಾಲಕರು ಎದುರಿಸಿದ ಸಂಕಷ್ಟ, ಅನುಭವಿಸಿದ ನೋವುಗಳನ್ನು ಕಣ್ಣಾರೆ ಕಂಡ ಕಥೆಯನ್ನು ಈಗ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ. ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಚಿತ್ರ ಇದಾಗಿದ್ದು, ಚಿತ್ರಮಂದಿರಕ್ಕೆ ಬಂದು ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕೆಂದು ನಿರ್ಮಾಪಕ ಶರಾವತಿ ಶಶಿಕುಮಾರ ಮತ್ತು ನಾಯಕ ನಟ ಚಿರಂತ್ ಕೋರಿದ್ದಾರೆ.
ಮೈಸೂರು, ವರುಣ, ಕೆ.ಆರ್. ನಗರ, ಸಾಲಿಗ್ರಾಮ ಹಾಗೂ ಮುರ್ಡೇಶ್ವರದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಕ ಚಿರಂತ್ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದಾರೆ. ನಾಯಕಿಯಾಗಿ ನಂದಿನಿ, ಬಾಲರಾಜ್ ವಾಡಿ, ಮಿಮಿಕ್ರಿ ಗೋಪಿ, ಹರಿಣಿ, ಚಂದ್ರಪ್ರಭ, ವಿನೋದ್ ಗೊಬ್ರಗಾಲ, ರಜಿನಿ, ದರ್ಶನ್, ಮುನಿಸ್ವಾಮಿ, ನವೀನ್ ಕುಮಾರ್ ಮುಂತಾದವರಿದ್ದಾರೆ.
ಧರ್ಮಾಚಾರಿ ಸಹ ನಿರ್ಮಾಪಕರಾಗಿದ್ದಾರೆ. ವೇದಾಂತ್ ಅತಿಶಯ್ ಜೈನ್ ಸಂಗೀತ, ವಂಶಿ ಸಂಕಲನ, ಶಶಿ ಆರಕ್ಷಕ ಅವರ ಕಥೆ, ಸಾಹಿತ್ಯ, ಸಂಭಾಷಣೆ, ನೃತ್ಯ, ಆನಂದ್ ಅವರ ಛಾಯಾಗ್ರಹಣ, ವಿ. ರಾಮದೇವ್ ಅವರ ಸಾಹಸ, ಕಲ್ಲೇಶ್, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ ಪತ್ರಿಕಾ ಸಂಪರ್ಕ, ದೇವು ಅವರ ಪ್ರಚಾರಕಲೆ ಈ ಚಿತ್ರಕ್ಕಿದೆ.