ಗದಗ:- ‘ಅತಿವೇಗ ತಿಥಿ ಬೇಗ’ ಎಂಬ ಗಾದೆ ಮಾತಿನಂತೆ ಗದಗನಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಜರುಗಿದೆ.
ಎಸ್, ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋದ ಸವಾರನೋರ್ವ ರಸ್ತೆ ಬದಿ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಹಾಗೂ ಹಿರೇಕೊಪ್ಪ ಮಾರ್ಗ ಮಧ್ಯೆ ಜರುಗಿದೆ.
ಹಿರೇಕೊಪ್ಪ ಗ್ರಾಮದ ಚನ್ನಪ್ಪ ಮರಬಸನ್ನವರ (65) ಮೃತ ದುರ್ದೈವಿ. ರೈತ ತನ್ನ ಜಮೀನಿಗೆ ನೀರು ಹಾಯಿಸಿ ಮನೆಗೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಘಟನೆ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



