ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ: ಸಂತೋಷ್ ಲಾಡ್ ಆರೋಪ

0
Spread the love

ಬೆಂಗಳೂರು: ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆಳಂದ ಚುನಾವಣೆ ಆಗಿ 5-6 ವರ್ಷ ಆಯ್ತು. ಎಸ್‌ಐಟಿ ಅವರು ಎಲೆಕ್ಷನ್ ಕಮಿಷನ್‌ಗೆ ಪತ್ರ ಬರೆದಿದ್ದಾರೆ, ಆದರೆ ಇದಕ್ಕೆ ಉತ್ತರ ಕೊಟ್ಟಿಲ್ಲ.

Advertisement

ಮೇಲ್ನೋಟದಲ್ಲಿ ಇದು ಸತ್ಯ ಆಗಿದೆ. ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ. ಬಿಹಾರದಲ್ಲಿ 3 ಲಕ್ಷ ಮನೆಗೆ 0 ನಂಬರ್ ಕೊಟ್ಟಿದ್ದಾರೆ. ಮೋದಿ ಹೀಗೆ ಅಕ್ರಮ ಮಾಡಿಯೇ ಚುನಾವಣೆಗಳನ್ನ ಗೆದ್ದಿರೋದು ಎಂದು ದೂರಿದ್ದಾರೆ.

ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷ್ಕರಣೆ ಮಾಡಲಿ ಯಾರು ಬೇಡ ಅಂದರು. ಬಿಹಾರ ತರಹ ಆಗುವ ಆತಂಕ ಇದೆ. ಎಲೆಕ್ಷನ್ ಕಮಿಷನರ್ ಅವರನ್ನ ಹೇಗೆ ನೇಮಕ ಆಗಬೇಕು ಅಂತ ಇತ್ತು. ಬಿಜೆಪಿಯವರು ಆ ನಿಯಮವನ್ನೇ ಬದಲಾವಣೆ ಮಾಡಿದರು. ಎಲೆಕ್ಷನ್ ಕಮಿಷನ್ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸರಿಯಾಗಿ ಉತ್ತರ ಕೊಟ್ಟಿಲ್ಲ.

ಇವರೆಲ್ಲ ಒಬ್ಬ ಮನುಷ್ಯನ್ನ ದೇವರು ಮಾಡಿದ್ದಾರೆ. ಈಗ ಇವರದ್ದು ಪಿಕ್ಚರ್ ನೋಡಬೇಕಂತೆ, ತೋರಿಸ್ತಾರೆ ನೋಡಿ. ಯಾರಪ್ಪನದ್ದು ಎಲ್ಲಮ್ಮನ ಜಾತ್ರೆ ಅಷ್ಟೇ. ಇವರಿಗೆ ಕೇವಲ ಒಬ್ಬ ವ್ಯಕ್ತಿ ಪಾಪ್ಯುಲರ್ ಆಗಬೇಕು ಅಷ್ಟೆ. ಕೊಳ್ಳೆ ಹೊಡೆದು ಹೋಗಬೇಕು ಅಷ್ಟೇ. ಮೋದಿ ಅವರೇ ಪಿಕ್ಚರ್ ನಿಮ್ಮದೆ ಓಡಿಸಿ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here